Watch.. ಚೆಟ್ಟಳ್ಳಿ ತೋಟದಲ್ಲಿ ಕಾಫಿ ಕಟಾವು ಮಾಡಿದ ಜರ್ಮನ್ನರು - ETV Bharath Karnataka
🎬 Watch Now: Feature Video
ಕೊಡಗು: ಜಿಲ್ಲೆಯಲ್ಲಿ ಅಕಾಲಿಕ ಮಳೆ, ಕಾರ್ಮಿಕರ ಕೊರತೆಯಲ್ಲಿ ಕಾಫಿ ಕೊಯ್ಯಲಾಗದೇ ಬೆಳೆಗಾರರು ಪರದಾಡುತ್ತಿರುವ ಸನ್ನಿವೇಶದಲ್ಲಿ ಜರ್ಮನಿಯ ಕೆಲ ಪ್ರವಾಸಿಗರು ಚೆಟ್ಟಳ್ಳಿ ಕಾಫಿತೋಟವೊಂದರಲ್ಲಿ ಕಾಫಿ ಕೊಯ್ಲು ಮಾಡಿ ಕೃಷಿ ಬಗ್ಗೆ ಅನುಭವ ಪಡೆದು ಕೊಂಡರು. ಜರ್ಮನ್ನಿಂದ ಮೈಸೂರಿಗೆ ಆಗಮಿಸಿದ ಕಾಯ, ಜೋಹಾನಿ, ಲಿನ್ಯೂಸ್, ಲೂಹಿಸ್, ಜಾಶ್ಮಿನ್ ಎಂಬುವವರು ಕಾಫಿ ಹಣ್ಣು ಕೊಯ್ಲು ಮಾಡುವ ಸಲುವಾಗಿ ಕೊಡಗಿಗೆ ಆಗಮಿಸಿ ಹಣ್ಣು ಕೊಯ್ದು ಸಂತಸ ಪಟ್ಟರು.
ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯ ಮುಳ್ಳಂಡ ಅಂಜನ್ ಮುತ್ತಪ್ಪನವರನ್ನು ಸಂಪರ್ಕಿಸಿ ತಂಡ ಚೆಟ್ಟಳ್ಳಿಯ ಕಾಫಿತೋಟದಲ್ಲೆಲ್ಲ ಸುತ್ತಾಡಿ ಕಾಫಿಯ ವೈಶಿಷ್ಯದ ಬಗ್ಗೆ ಮಾಹಿತಿ ಪಡೆದರು. ಬೆಳಗಿನಿಂದ ಮಧ್ಯಾಹ್ನದವರೆಗೆ ಕಾಫಿಹಣ್ಣು ಕೊಯ್ಲು ಮಾಡಿದ ಯುವಕ ಯುವತಿಯರು ಸಂತಸ ಪಟ್ಟರು ತಾವೇ ಕಾಫಿ ಗೀಡದ ಬುಡಕ್ಕೆ ತಾಟ್ ಹಾಕಿಕೊಂಡು ಕಾಫಿ ಉದುರಿಸಿ ಶುಚಿಗೊಳಿಸಿಕೂಡ ಕೊಟ್ಟರು.
ಅಷ್ಟು ಮಾತ್ರವಲ್ಲ ಸುಂದರ ಪ್ರಕೃತಿಯ ನಡುವೆ ಸುತ್ತಾಡಿ ಆನಂದಿಸಿದರು. ಕೊಡಗಿನ ಹಸಿರು ಪರಿಸರದಲ್ಲಿನ ಕಾಫಿಯನ್ನು ಕೊಯ್ಲು ಮಾಡಿ ತುಂಬಾನೆ ಆನಂದಿಸಿದ್ದೇವೆ. ಇಂದು ನಮಗೆ ಹೊಸ ಅನುಭವವನ್ನು ನೀಡಿದೆ ಎಂದು ವಿದೇಶಿ ಕಾಯ ತಿಳಿಸಿದರು. ಕೊಡಗಿನ ಕಾಫಿಯನ್ನು ಸವಿದು, ಬೆಳೆಯ ಹಿಂದೆ ಹಲವು ಪರಿಶ್ರಮವಿದೆ. ಇಲ್ಲಿನ ಪರಿಸರ ನಮ್ಮನ್ನು ಆಕರ್ಷಿಸಿದ್ದು ಮತ್ತೆ ಬರುವುದಾಗಿ ಹೇಳಿ ತೆರಳಿದರು.
ಇದನ್ನೂ ಓದಿ: ಕಾಡುಪ್ರಾಣಿಗಳ ಹಾವಳಿ: ಕೊಡಗಿನಲ್ಲಿ ಕಾಫಿ ಕಟಾವಿಗೆ ಕಾರ್ಮಿಕರ ಹಿಂದೇಟು