ವಾರಣಾಸಿಯಲ್ಲಿ ಕುಣಿದು ಕುಪ್ಪಳಿಸಿದ ಜಿ20 ಶೃಂಗಸಭೆ ಅತಿಥಿಗಳು: ವಿಡಿಯೋ - ಜಿ20 ಸಸ್ಟೈನಬಲ್ ಫೈನಾನ್ಸ್ ವರ್ಕಿಂಗ್ ಗ್ರೂಪ್ ಸಭೆ

🎬 Watch Now: Feature Video

thumbnail

By ETV Bharat Karnataka Team

Published : Sep 15, 2023, 8:17 AM IST

ವಾರಣಾಸಿ (ಉತ್ತರ ಪ್ರದೇಶ): ವಾರಣಾಸಿಯಲ್ಲಿ ಎರಡು ದಿನಗಳ ಕಾಲ ನಡೆದ ಜಿ20 ಸಸ್ಟೈನಬಲ್ ಫೈನಾನ್ಸ್ ವರ್ಕಿಂಗ್ ಗ್ರೂಪ್ ಸಭೆ ಗುರುವಾರ ಕೊನೆಗೊಂಡಿದೆ. ಈ ಸಭೆಗೆ ಬಂದ 80 ಪ್ರತಿನಿಧಿಗಳ ಜೊತೆಗೆ, 15 ಅಧಿಕಾರಿಗಳು ಬನಾರಸ್ ಸ್ಥಳದ ಸಂಸ್ಕೃತಿ ಮತ್ತು ವಿಶೇಷತೆಗಳ ಕುರಿತು ಅರಿತುಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಜಿ20 ಕುರಿತು ಪ್ರತ್ಯೇಕ ಸಭೆ ನಡೆಯಿತು. ಮೊದಲ ಸಭೆ ಏಪ್ರಿಲ್‌ನಲ್ಲಿ, ಎರಡನೆಯದು ಜುಲೈನಲ್ಲಿ, ಮೂರನೆಯದು ಆಗಸ್ಟ್‌ನಲ್ಲಿ ನಡೆದಿದ್ದು, ನಾಲ್ಕನೇ ಸೆಪ್ಟೆಂಬರ್‌ನಲ್ಲಿ ನಡೆಯಿತು. ನಾಲ್ಕು ಪ್ರತ್ಯೇಕ ಸಭೆಗಳಲ್ಲಿ 20 ದೇಶಗಳ ಪ್ರತಿನಿಧಿಗಳ ಜೊತೆಗೆ ಒಂಬತ್ತು ಆಹ್ವಾನಿತ ದೇಶಗಳ ವಿಶೇಷ ಅತಿಥಿಗಳೂ ಉಪಸ್ಥಿತರಿದ್ದರು. ಬನಾರಸ್‌ನಲ್ಲಿ ಭಾರತದ ಸಂಸ್ಕೃತಿಯನ್ನು ಪರಿಚಯಿಸಲು ವಿವಿಧ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಲ್ಕನೇ ಮತ್ತು ಅಂತಿಮ ಸಭೆಯಲ್ಲಿ ಭಾಗವಹಿಸಲು ಬಂದ ಅತಿಥಿಗಳಿಗೆ ಬುಧವಾರ ಗಂಗಾ ಆರತಿ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಗುರುವಾರ ಸಭೆ ಮುಗಿದ ನಂತರ, ಎಲ್ಲಾ ಸದಸ್ಯರಿಗೆ ಸಾರನಾಥವನ್ನು ತೋರಿಸಲಾಯಿತು.

ಎಲ್ಲ ಅತಿಥಿಗಳು ಭಗವಾನ್ ಬುದ್ಧನ ಉಪದೇಶದ ಮಾಡಿದ ಸ್ಥಳ ವೀಕ್ಷಿಸಿ ಬಹಳ ಸಂತಸಪಟ್ಟರು. ಇಲ್ಲಿ ರಾಧಾ ಕೃಷ್ಣನ ವೇಷ ಧರಿಸಿದ ಕಲಾವಿದರೊಂದಿಗೆ ಅತಿಥಿಗಳು ಹರೇ ರಾಮ, ಹರೇ ಕೃಷ್ಣ ಗೀತೆಗೆ ತಕ್ಕಂತೆ ಕುಣಿದು ಸಂತಸ ವ್ಯಕ್ತಪಡಿಸಿದರು. ಅತಿಥಿಗಳೆಲ್ಲರೂ ಸಂಸ್ಕೃತಿ ಮತ್ತು ನಾಗರಿಕತೆಯ ಜೊತೆಗೆ ಬನಾರಸ್‌ನ ರಂಗಿನಲ್ಲಿ ಮುಳುಗಿಹೋದರು. 

ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರನ ಭಸ್ಮಾರತಿಯಲ್ಲಿ ಭಾಗಿಯಾದ ಅಕ್ಷಯ್​ ಕುಮಾರ್​, ಶಿಖರ್​ ಧವನ್​​

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.