ಹುಲ್ಲುಹಾಸುಗಳಲ್ಲಿ ಯೋಗಾಭ್ಯಾಸ ಮಾಡಿದ G20 ಸದಸ್ಯರು - Historic Mughal Garden Nishat

🎬 Watch Now: Feature Video

thumbnail

By

Published : May 24, 2023, 4:43 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಜಿ 20 ಪ್ರವಾಸೋದ್ಯಮ ಸಭೆ ನಿನ್ನೆ ಮುಕ್ತಾಯವಾಯಿತು. ಈ ಸಮಯದಲ್ಲಿ ವಿದೇಶಿ ದೇಶಗಳ ಪ್ರತಿನಿಧಿಗಳು ಮತ್ತು ತಜ್ಞರು, ಪರಿಸರ ಪ್ರವಾಸೋದ್ಯಮ, ಸುಸ್ಥಿರ ಪ್ರವಾಸೋದ್ಯಮ ಮತ್ತು ಚಲನಚಿತ್ರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಪ್ರವಾಸೋದ್ಯಮ  ಉತ್ತೇಜಿಸುವ ಕರಡು ಮತ್ತು ಕಾರ್ಯಸೂಚಿ  ಸಹ ಸಿದ್ಧಪಡಿಸಲಾಯಿತು. ಗೋವಾದಲ್ಲಿ ನಡೆಯಲಿರುವ ಜಿ 20 ಸಚಿವರ ಸಭೆಯ ವೇಳೆ ಕರಡು ಅಂತಿಮಗೊಳ್ಳಲಿದ್ದು, ಬಳಿಕ ಅಂತಾರಾಷ್ಟ್ರೀಯ ಸಂಸ್ಥೆಯು ಈ ಕಾರ್ಯಸೂಚಿಯನ್ನು ಜಾಗತಿಕ ಮಟ್ಟದಲ್ಲಿ ಜಾರಿಗೆ ತರಲು ಕ್ರಮಕೈಗೊಳ್ಳಲಿದೆ.

ಹುಲ್ಲುಹಾಸುಗಳಲ್ಲಿ ಯೋಗಾಭ್ಯಾಸ : ಇಂದು ಪ್ರತಿನಿಧಿಗಳಿಗೆ ಯಾವುದೇ ಕಾರ್ಯಕ್ರಮ  ನಿಗದಿಪಡಿಸಲಾಗಿಲ್ಲ. ಆದರೆ, ಬೆಳಗ್ಗೆ ನಗರದ ವಿವಿಧ ಐತಿಹಾಸಿಕ ಸ್ಥಳಗಳಿಗೆ ಪ್ರತಿನಿಧಿಗಳನ್ನು ಕರೆದೊಯ್ಯಲಾಗುತ್ತಿದೆ. ಮುಂಜಾನೆ ಪ್ರತಿನಿಧಿಗಳು ಹೋಟೆಲ್ ಲಲಿತ್‌ನ ಹುಲ್ಲುಹಾಸುಗಳಲ್ಲಿ ಯೋಗಾಭ್ಯಾಸ ಮಾಡಿದರು. ನಂತರ ಅವರನ್ನು ಐತಿಹಾಸಿಕ ಮೊಘಲ್ ಉದ್ಯಾನ ನಿಶಾತ್‌ಗೆ ಕರೆದೊಯ್ಯಲಾಯಿತು. ನಂತರ ಪ್ರತಿನಿಧಿಗಳು ರಾಯಲ್ ಸ್ಪ್ರಿಂಗ್ಸ್ ಗಾಲ್ಫ್ ಕೋರ್ಸ್‌ನಲ್ಲಿ ಗಾಲ್ಫ್ ಆಡುತ್ತಿರುವುದು ಕಂಡುಬಂದಿತು. ಇದಲ್ಲದೇ ದಾಲ್ ಸರೋವರದಲ್ಲಿ ಶಿಕಾರಾ ರೈಡ್‌ಗೂ ತೆರಳಿದ್ದರು.

ಕರಕುಶಲ ವಸ್ತುಗಳ ನೇರ ಪ್ರದರ್ಶನ: ಇಂದು, ಮಧ್ಯಾಹ್ನ ಅವರನ್ನು ಶ್ರೀನಗರ ನಗರ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವರು ಕಾಶ್ಮೀರ ಹಾತ್, ಆರ್ಟ್ ಎಂಪೋರಿಯಂ, ಪೋಲೋ ವ್ಯೂ ಹೈ ಸ್ಟ್ರೀಟ್ ಮಾರ್ಕೆಟ್ ಮತ್ತು ಕ್ರೀಡಾ ಮೈದಾನಗಳಿಗೆ ಭೇಟಿ ನೀಡಲಿದ್ದಾರೆ. ಈ ಭೇಟಿಗಳಲ್ಲಿ ಪ್ರತಿನಿಧಿಗಳಿಗೆ ಕಾಶ್ಮೀರಿ ಕರಕುಶಲ ವಸ್ತುಗಳ ನೇರ ಪ್ರದರ್ಶನಗಳನ್ನು ನೀಡಲಾಗುವುದು ಮತ್ತು ಸ್ಥಳೀಯ ಆಟಗಾರರೊಂದಿಗೆ ಸಂವಾದ ನಡೆಸುವುದನ್ನು ಸಹ ಕಾಣಬಹುದು. ಶ್ರೀನಗರದ ಮೇಯರ್ ಜುನೈದ್ ಮಟ್ಟೂ ಅವರು ಶೇರ್ ಕಾಶ್ಮೀರ್ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಭೋಜನವನ್ನು ಆಯೋಜಿಸುತ್ತಾರೆ. ಅಲ್ಲಿ ಪ್ರತಿನಿಧಿಗಳು ಅವರೊಂದಿಗೆ ಸಂವಾದ ನಡೆಸುತ್ತಾರೆ.

ಇದನ್ನೂ ಓದಿ: ಜಿ 20 ಪ್ರತಿನಿಧಿಗಳಿಂದ ಯೋಗಾಭ್ಯಾಸ- ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.