ರಾಮನಗರ: ಮನಕಲಕುವಂತಿದೆ ಅಪಘಾತಕ್ಕೂ ಮುಂಚಿನ ಗೆಳೆಯರ ಕುಚುಕು ವಿಡಿಯೋ.. - ರಾಮನಗರ
🎬 Watch Now: Feature Video
ರಾಮನಗರ: ಚನ್ನಪಟ್ಟಣ ತಾಲೂಕಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಸಾಯುವ ಕೆಲ ನಿಮಿಷಗಳ ಮೊದಲು ನಾಲ್ಕು ಮಂದಿ ಸ್ನೇಹಿತರು ಕುಚುಕು, ಕುಚುಕು ಹಾಡು ಹಾಕಿಕೊಂಡು ಜಾಲಿ ಮೂಡ್ನಲ್ಲಿ ಬರುತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗೆಳೆಯರ ಗೆಳೆತನದ ಹಾಡು ಕೇಳಿದರೆ ಎಂಥವರ ಮನ ಕಲಕುತ್ತಿದೆ.
ರಾಮನಗರದ ವಿನಯ್, ವಿಜಯ್, ಮಂಜೇಶ್ ಮತ್ತು ನಿಖಿಲ್ ಕೆಲಸ ನಿಮಿತ್ತ ಮದ್ದೂರು ತಾಲೂಕಿನ ಬೆಸಗರಹಳ್ಳಿಗೆ ಹೋಗಿ ರಾಮನಗರಕ್ಕೆ ಹಿಂದಿರುಗುತ್ತಿದ್ದರು. ಹಿಂದಿರುಗುವಾಗ ಅಪಘಾತಕ್ಕೂ ಮುನ್ನ ಕುಚುಕ್ಕೂ ಹಾಡು ಹೇಳಿಕೊಂಡು ಬರುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾವಿನಲ್ಲಿ ಜೊತೆಯಾದ ಕುಚುಕುಗಳು: ನಾಲ್ಕೂ ಮಂದಿ ಒಳ್ಳೆಯ ಸ್ನೇಹಿತರಾಗಿದ್ದು, ಕುಚುಕು ಹಾಡು ಹಾಡುವ ಸಂದರ್ಭದಲ್ಲಿ ಚಾಲಕ ಮಂಜೇಶ್ ಭಾವನಾತ್ಮಕವಾಗಿದ್ದು, ಈತನ ಪಕ್ಕ ಕುಳಿತಿದ್ದ ವಿನಯ್ ಸಮಾಧಾನ ಮಾಡುವ ದೃಶ್ಯವಿದೆ. ಇನ್ನು ಈ ಇಬ್ಬರು ಕುಚುಕುಗಳು ಸಾವಿನಲ್ಲೂ ಜೊತೆಯಾಗಿರುವುದು ವಿಷಾದನೀಯ ಎನ್ನಬಹುದು. ಅಪಘಾತದಲ್ಲಿ ತೀವ್ರಗಾಯಗೊಂಡಿರುವ ವಿಜಯ್ ಮತ್ತು ನಿಖಿಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಇಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Mysore Bangalore Highway accident: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.. ಓರ್ವ ಸಾವು ; 3 ಮಂದಿಗೆ ತೀವ್ರ ಗಾಯ