ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ.. ತುಮಕೂರಿನ ಅಭಿಮಾನಿಯಿಂದ ಉಚಿತ ಹೇರ್ಕಟ್ - Free haircut
🎬 Watch Now: Feature Video
ತುಮಕೂರು: ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ತುಮಕೂರಿನ ಅಭಿಮಾನಿಯೊಬ್ಬರು ಉಚಿತವಾಗಿ ಹೇರ್ಕಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಜಿಲ್ಲೆಯ ಗುಬ್ಬಿ ತಾಲೂಕಿನ ಕೆಜಿ ಟೆಂಪಲ್ ಗ್ರಾಮದ ಪವನ್ ಎಂಬ ಯುವಕ ಕಟಿಂಗ್ ಶಾಪ್ ನಡೆಸುತ್ತಿದ್ದು, ಮೂರು ದಿನಗಳ ಕಾಲ ಉಚಿತವಾಗಿ ಸಾರ್ವಜನಿಕರಿಗೆ ಹೇರ್ಕಟ್ ಮಾಡಲು ನಿರ್ಧರಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಕಟ್ಟಾ ಅಭಿಮಾನಿ ಆಗಿರುವ ಪವನ್ ತಮ್ಮ ಸಲೂನ್ನಲ್ಲಿ ಪುನೀತ್ ಭಾವಚಿತ್ರ ಇರಿಸಿ ಪೂಜಿ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಮೂರು ದಿನಗಳ ಕಾಲ ಉಚಿತವಾಗಿ ಹೇರ್ ಕಟ್ ಮಾಡುತ್ತಿದ್ದಾರೆ.
Last Updated : Feb 3, 2023, 8:30 PM IST