ಮಾಜಿ ಸಚಿವ ರೇವುನಾಯಕ ಬೆಳಮಗಿ ಸಖತ್ ಡ್ಯಾನ್ಸ್ - former minister revunayak belamagi dance in kalburgi
🎬 Watch Now: Feature Video

ಕಲಬುರಗಿ: ಇಳಿವಯಸ್ಸಿನಲ್ಲೂ ಡಿಜೆ ಹಾಡಿಗೆ ಸಖತ್ ಡ್ಯಾನ್ಸ್ ಮಾಡುವ ಮೂಲಕ ಮಾಜಿ ಸಚಿವ ರೇವುನಾಯಕ ಬೆಳಮಗಿ ಗಮನ ಸೆಳೆದಿದ್ದಾರೆ. ಕಲಬುರಗಿ ತಾಲೂಕಿನ ಜಂಬಗಾ (ಬಿ) ಗ್ರಾಮದ ಶ್ರೀ ಅಂಬಾ ಭವಾನಿ ದೇವಸ್ಥಾನದ ನೂತನ ಕಳಸಾರೋಹಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾದ ಬೆಳಮಗಿ, ನೃತ್ಯ ಮಾಡುತ್ತಾ ಯುವಕರನ್ನು ಹುರಿದುಂಬಿಸಿದರು. ಟಪ್ಪಾಂಗುಂಚಿ ಹಾಡು ಮಾತ್ರವಲ್ಲದೆ ಕನ್ನಡ ಹಾಡಿಗೂ ಹೆಜ್ಜೆ ಹಾಕಿದರು. ಗ್ರಾಮದ ಯುವಕರ ಜೊತೆಗೆ ಸಖತ್ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು.