ಅಂಜನಾದ್ರಿ ಹುಂಡಿ ಎಣಿಕೆ : ವಿದೇಶಿ ನೋಟು, ನಾಣ್ಯಗಳು ಪತ್ತೆ - ಅಂಜನಾದ್ರಿ ಹುಂಡಿ ಎಣಿಕೆ
🎬 Watch Now: Feature Video
Published : Nov 3, 2023, 6:52 PM IST
ಗಂಗಾವತಿ: ತಾಲೂಕಿನ ಚಿಕ್ಕರಾಂಪೂರದಲ್ಲಿರುವ ಹಿಂದೂ ಧಾರ್ಮಿಕ ಕ್ಷೇತ್ರ ಅಂಜನಾದ್ರಿ ದೇಗುಲದಲ್ಲಿ ನಡೆದ ಹುಂಡಿ ಎಣಿಕೆ ವೇಳೆ ಒಂದು ವಿದೇಶಿ ನೋಟು ಸೇರಿದಂತೆ ವಿವಿಧ ದೇಶಗಳ ಒಟ್ಟು ಎಂಟು ನಾಣ್ಯಗಳು ಪತ್ತೆಯಾಗಿವೆ. ದೇವಸ್ಥಾನದ ಆವರಣದಲ್ಲಿ ಇರಿಸಿದ್ದ ಹುಂಡಿಯಲ್ಲಿ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಲ್ಲಿಕೆಯಾಗಿದ್ದ ಹಣ ಎಣಿಕೆ ಕಾರ್ಯ ಇಂದು ತಹಶೀಲ್ದಾರ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹಿರೇಮಠ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ ಅಮೆರಿಕದ (ಯುಎಸ್ಎ) ಒಂದು ಡಾಲರ್, ಯುಕೆ, ಜಪಾನ್, ನೇಪಾಳ, ಮಲೇಶಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ದಕ್ಷಿಣ ಕೋರಿಯಾ ಸೇರಿದಂತೆ ಏಳು ದೇಶಗಳ ಒಟ್ಟು ಎಂಟು ನಾಣ್ಯಗಳು ಪತ್ತೆಯಾಗಿವೆ.
27 ಲಕ್ಷ ರೂ ಸಂಗ್ರಹ: ಹುಂಡಿಯಲ್ಲಿ ಒಟ್ಟು 27,16 ಲಕ್ಷ ಮೊತ್ತವು ಭಕ್ತರಿಂದ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಕಳೆದ ಬಾರಿ ಎಣಿಕೆ ಮಾಡಿದ್ದಾಗ 31,77 ಲಕ್ಷ ರೂಪಾಯಿ ಮೊತ್ತದ ಹಣ ಸಂಗ್ರಹವಾಗಿತ್ತು. ಇದೀಗ 44 ದಿನಕ್ಕೆ 27,16 ಲಕ್ಷ ಮೊತ್ತದ ಹಣ ಸಂಗ್ರಹವಾಗಿದೆ. ಹುಂಡಿಯಲ್ಲಿನ ಹಣದ ಎಣಿಕೆ ಕಾರ್ಯಕ್ಕೆ ಕಂದಾಯ ಇಲಾಖೆ ಮತ್ತು ದೇವಸ್ಥಾನದ ಒಟ್ಟು 40ಕ್ಕೂ ಹೆಚ್ಚು ಸಿಬ್ಬಂದಿಗಳನ್ನ ನಿಯೋಜಿಸಲಾಗಿತ್ತು. ಸತತ ಐದು ಗಂಟೆಗೂ ಹೆಚ್ಚು ಕಾಲ ಹಣದ ಎಣಿಕೆ ಕಾರ್ಯ ನಡೆಯಿತು.
ಇದನ್ನೂ ಓದಿ: ರಜಿನಿಕಾಂತ್ಗೆ ದೇವಸ್ಥಾನ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿದ ಅಭಿಮಾನಿ: ವಿಡಿಯೋ