ಗಡ್ಡದನಾಯಕನಹಳ್ಳಿ ಗ್ರಾಮಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಬಸ್ ಸಂಚಾರ ವ್ಯವಸ್ಥೆ - First bus service to Gaddadanayakanahalli village

🎬 Watch Now: Feature Video

thumbnail

By

Published : Jul 24, 2023, 3:53 PM IST

ದೇವನಹಳ್ಳಿ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಆರಾಧ್ಯ ದೈವ ಇರುವ ಗ್ರಾಮಕ್ಕೆ ಮೊದಲ ಬಾರಿಗೆ ಇಂದು ಬಸ್ ಸಂಚಾರ ವ್ಯವಸ್ಥೆ ಆರಂಭಿಸಲಾಯಿತು. ದೇವನಹಳ್ಳಿ ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಕೆಎಸ್ಆರ್​ಟಿಸಿ ಬಸ್ ಸಂಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪ ಹಾಗೂ ಶಾಸಕ ಪ್ರದೀಪ್ ಈಶ್ವರ್ ಚಾಲನೆ ನೀಡಿದರು. 

ಇನ್ನು ಶಾಸಕ ಪ್ರದೀಪ್ ಈಶ್ವರ್ ದೇವನಹಳ್ಳಿ ತಾಲೂಕಿನ ಗಡ್ಡದನಾಯಕನಹಳ್ಳಿ ಗ್ರಾಮದ ಪ್ರಸಿದ್ಧ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಗ್ರಾಮದಲ್ಲಿ ಇದುವರೆಗೂ ಬಸ್ ವ್ಯವಸ್ಥೆ ಇರಲಿಲ್ಲ. ಜನರು ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ ಮಾಡಿದ್ದರೂ ಕೂಡ ಯಾರೂ ಸ್ಪಂದಿಸಿರಲಿಲ್ಲ. ಈ ಬಗ್ಗೆ ಪ್ರದೀಪ್ ಈಶ್ವರ್ ಸಚಿವ ಮುನಿಯಪ್ಪ ಅವರ ಗಮನಕ್ಕೆ ತಂದಿದ್ದರು. ಹೀಗಾಗಿ ಇಂದು ದೇವನಹಳ್ಳಿಯಿಂದ ಯಲಿಯೂರು, ದೊಡ್ಡತತ್ತಮಂಗಲ ಗಡ್ಡದನಾಯಕನಹಳ್ಳಿ, ವಿಜಯಪುರಕ್ಕೆ ಸಂಪರ್ಕ ಕಲ್ಪಿಸಲು ಬಸ್ ಸಂಚಾರ ಆರಂಭಿಸಲಾಯಿತು. 

ಪ್ರದೀಪ್ ಈಶ್ವರ್ ಮಾತು ಕೊಟ್ಟಂತೆ ಬಸ್ ಹಾಕಿಸಿಕೊಟ್ಟಿದ್ದಾರೆ. ಸಚಿವರು ಹಾಗೂ ಶಾಸಕ ಪ್ರದೀಪ್ ಈಶ್ವರ್ ಬಸ್​ನಲ್ಲೇ ಪ್ರಯಾಣ ಬೆಳೆಸಿದರು. ಇನ್ನು ಈ ಭಾಗದಲ್ಲಿ ಬಸ್ ಸಂಚಾರ ಆರಂಭದಿಂದ ಶಾಲಾ ಕಾಲೇಜು ಮಕ್ಕಳಿಗೆ, ದೇವಾಲಯಕ್ಕೆ ಬರಲು ಅನುಕೂಲವಾಗಲಿದ್ದು, ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.

ಇದನ್ನೂ ನೋಡಿ: ಹಾಸನ: ಮೈದುಂಬಿ ಹರಿಯುತ್ತಿರುವ ಮೂಕನಮನೆ ಜಲಪಾತ.. ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.