ಜಿಗಣಿ ಪಟ್ಟಣದಲ್ಲಿ ಆಟೋ ಮೊಬೈಲ್ಸ್ ಆಯಿಲ್ ಅಂಗಡಿಗೆ ಬೆಂಕಿ: 22 ಲಕ್ಷ ರೂ. ಸರಕು ಸುಟ್ಟು ಭಸ್ಮ - ETV Bharat kannada News

🎬 Watch Now: Feature Video

thumbnail

By

Published : Mar 27, 2023, 6:54 PM IST

ಆನೇಕಲ್​ (ಬೆಂಗಳೂರು) : ಜಿಗಣಿ ಪಟ್ಟಣದ ಎಪಿಸಿ-ಪುರಸಭೆ ಮುಖ್ಯರಸ್ತೆಯಲ್ಲಿರುವ ಓಂಸಾಯಿ ಆಟೋ ಮೋಬೈಲ್ಸ್ ಆಯಿಲ್ ಅಂಗಡಿಗೆ ಇಂದು ದಿಢೀರ್ ಬೆಂಕಿ ಹೊತ್ತಿಕೊಂಡ ಪರಿಣಾಮ ಇಡೀ ಬಿಲ್ಡಿಂಗ್ ಬೆಂಕಿಯ ಹೊಗೆಯಲ್ಲಿ ಮುಳುಗಿದೆ. ಮಂಜು ಬಿಲ್ಡಿಂಗ್​ನ ನೆಲ ಮಹಡಿಯ ಆಯಿಲ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿಗೆ ಅಂಗಡಿಯಲ್ಲಿ ಆಯಿಲ್​ ಕ್ಯಾನ್ ಸ್ಫೋಟಗೊಂಡು ಇಡೀ ಅಂಗಡಿ ಅಗ್ನಿಗಾಹುತಿಯಾಗಿದೆ. 

ಪಕ್ಕದಲ್ಲಿ ಕೆಟ್ಟು ನಿಂತ ದ್ವಿಚಕ್ರ ವಾಹನಗಳು, ಪ್ಲೆಕ್ಸ್ ಬೋರ್ಡ್ ಮತ್ತು ಟೈರ್​ಗಳಿಗೆ ಬೆಂಕಿ ತಗುಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಕಿ ಅಂಗಡಿಯನ್ನು ಸುಟ್ಟು ಭಸ್ಮಗೊಳಿಸಿದೆ. ಘಟನೆಯಲ್ಲಿ ಅಂಗಡಿಗೆ ಬೆಂಕಿ ಬಿದ್ಧ ಪರಿಣಾಮ ಅಂಗಡಿ ಮಾಲೀಕರಾದ ಗೋಪಿ ಸರವಣ ಅವರ 22 ಲಕ್ಷಕ್ಕೂ ಅಧಿಕ ಸರಕು ನಾಶವಾಗಿದೆ. ಈ ವೇಳೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಮನೆ ಮೇಲಿನ ಮೂರು ಮಹಡಿಯ ಜನರು ಹೊರಗೆ ಬಂದಿದ್ದರಿಂದ ಯಾರಿಗೂ ಅಪಾಯವಾಗಿಲ್ಲ. ಬಳಿಕ ತತ್​​​ಕ್ಷಣ ಆನೇಕಲ್​ನ ಮೂರು ಅಗ್ನಿಶಾಮಕದಳ ಮತ್ತು ಜಿಗಣಿ ಪೊಲೀಸರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ :ಕಾರವಾರ: ಹತ್ತಾರು ಎಕರೆ ಅರಣ್ಯ ಅಗ್ನಿಗಾಹುತಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.