ಶಾರ್ಟ್ ಸರ್ಕ್ಯೂಟ್ ಶಂಕೆ: ಅಗ್ನಿಗಾಹುತಿಯಾದ ಮೊಬೈಲ್ ಅಂಗಡಿ - ಅಗ್ನಿಗಾಹುತಿಯಾದ ಮೊಬೈಲ್ ಅಂಗಡಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18104690-thumbnail-16x9-news.jpg)
ಬೆಂಗಳೂರು: ಇಡೀ ರಾತ್ರಿ ಮೊಬೈಲ್ ಚಾರ್ಜ್ ಇಟ್ಟು ಮಲಗುವವರೇ ಎಚ್ಚರ. ನಗರದಲ್ಲಿ ಅಗ್ನಿ ಅವಘಡವೊಂದು ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಮೊಬೈಲ್ ಅಂಗಡಿ ಸುಟ್ಟು ಭಸ್ಮವಾಗಿದೆ. ರಾತ್ರಿಯಿಡಿ ಮೊಬೈಲ್ ಚಾರ್ಜ್ ಇಟ್ಟಿದ್ದರಿಂದ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿದೆ ಎನ್ನಲಾಗಿದೆ. ವಿಜಯನಗರದ ಠಾಣಾ ವ್ಯಾಪ್ತಿಯ ಮೊಬೈಲ್ ಅಂಗಡಿಲ್ಲಿ ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಐಸ್ಕ್ರೀಮ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ: ಮಂಗಳೂರು ನಗರದ ಹೊರವಲಯದ ಅಡ್ಯಾರ್ನಲ್ಲಿರುವ ಐಸ್ ಕ್ರೀಮ್ ದಾಸ್ತಾನು ಹಾಗೂ ತಯಾರಿಕಾ ಘಟಕದಲ್ಲಿ ತಡರಾತ್ರಿ ಅಗ್ನಿ ಅನಾಹುತ ಸಂಭವಿಸಿತು. ಹರ್ಷಮಣಿ ಎಸ್.ರೈ ಎಂಬವರಿಗೆ ಸೇರಿದ ಪೋಲಾರ್ ಐಸ್ ಕ್ರೀಂ ಸುಪರ್ ಸ್ಟಾಕಿಸ್ಟ್ ಹೆಸರಿನ ದಾಸ್ತಾನು ಮಳಿಗೆ ಇದಾಗಿದೆ. ಮೊದಲು ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಐಸ್‌ಕ್ರಿಮ್ ತಯಾರಿಕಾ ಘಟಕಕ್ಕೂ ವ್ಯಾಪಿಸಿದೆ.
ಇದನ್ನೂ ಓದಿ: ಮಂಗಳೂರು: ಐಸ್ಕ್ರೀಮ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ