ಬಾಗಲಕೋಟೆ, ಬೀಳಗಿಯಲ್ಲಿ ನಟ ಸುದೀಪ್​ ರೋಡ್ ಶೋ - ಶಾಸಕ ವೀರಣ್ಣ ಚರಂತಿಮಠ

🎬 Watch Now: Feature Video

thumbnail

By

Published : May 2, 2023, 10:53 PM IST

ಬಾಗಲಕೋಟೆ : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದು, ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿದರು. ಇಂದು ಬೀಳಗಿ ಮತ್ತು ಬಾಗಲಕೋಟೆಯಲ್ಲಿ ಕಿಚ್ಚ ಸುದೀಪ್​ ಅವರನ್ನು ನೋಡಲು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿರುವುದು ಗಮನ ಸೆಳೆಯಿತು.

ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮುರುಗೇಶ್ ಆರ್ ನಿರಾಣಿ ಪರ ನಗರದ ಶಿವಾಜಿ ಸರ್ಕಲ್​ನಿಂದ ಆರಂಭವಾದ ಬೃಹತ್ ರೋಡ್ ಶೋ ಬಸವೇಶ್ವರ ಸರ್ಕಲ್,‌ ಡಾ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ‌ ಸಾಗಿ ಮುಂದೆ ಗಾಂಧಿ ಸರ್ಕಲ್​ನಲ್ಲಿ ಕೊನೆಗೊಂಡಿತು. ನಂತರ ಬಾಗಲಕೋಟೆ ನಗರಕ್ಕೆ ಆಗಮಿಸಿದ ಚಿತ್ರ ನಟ ಸುದೀಪ್​ ಬಸವೇಶ್ವರ ವೃತ್ತದಲ್ಲಿ ಅಪಾರ ಜನಸ್ತೋಮ ಮಧ್ಯೆ ರೋಡ್ ಶೋ‌ ನಡೆಸಿದರು. ಬಸವೇಶ್ವರ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಸಂಚಾರ ಮಾಡಿ, ಶಾಸಕ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ರಾಜಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಇದನ್ನೂ ಓದಿ :  ಬಜರಂಗದಳ ನಮ್ಮ ಸಂಸ್ಕೃತಿ, ಅವ್ರು ಧರ್ಮ ರಕ್ಷಣೆ ಮಾಡುವವರು: ಸಿಎಂ ಬೊಮ್ಮಾಯಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.