ಹುಬ್ಬಳ್ಳಿ: ಬರದ ಬೇಗೆಯಲ್ಲಿ ಬೆಂದ ಭುವಿಗೆ ವರುಣ ಸಿಂಚನ
🎬 Watch Now: Feature Video
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆ ಸುರಿಯಿತು. ಹಲವು ದಿನಗಳಿಂದ ಮುಂಗಾರು ಮಳೆ ಕೈ ಕೊಟ್ಟಿತ್ತು. ಅಲ್ಲದೇ ಹಿಂಗಾರು ಬಿತ್ತನೆ ಮಾಡಿದ್ದ ರೈತರು ಮಳೆಯಿಲ್ಲದೇ ಆಕಾಶದತ್ತ ಮುಖ ಮಾಡಿ ಕುಳಿತಿದ್ದರು. ಆದರೂ ಮಳೆಯ ಆಗಮನವಾಗದೇ ಬರಗಾಲದ ಛಾಯೆ ಆವರಿಸಿತ್ತು. ಸೋಮವಾರ ಸಂಜೆ 5 ಗಂಟೆಯ ಸುಮಾರಿಗೆ ಆರಂಭವಾದ ಮಳೆ ನಿರಂತರವಾಗಿ 8 ಗಂಟೆಯವರೆಗೂ ಬಿಡದೆ ಧೋ ಎನ್ನುತ್ತಾ ಸುರಿಯಿತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ; ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಕಳೆದ ಹಳವು ದಿನಗಳಿಂದ ಮಳೆ ಕಾಣದ ಜನರಿಗೆ ಕೊನೆಗೂ ವರುಣ ಕೃಪೆ ತೋರಿದ್ದಾನೆ. ಇನ್ನೊಂದೆಡೆ, ರೈತರ ಮುಖದಲ್ಲೂ ಮಂದಹಾಸ ಮೂಡಿದೆ. ವಾಣಿಜ್ಯ ನಗರಿಯ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ ದೃಶ್ಯ ಒಂದೆಡೆ ಸಾಮಾನ್ಯವಾಗಿ ಕಂಡುಬಂದರೆ, ನಗರದ ಪ್ರಮುಖ ರಸ್ತೆಗಳಲ್ಲಿ ಚರಂಡಿ ನೀರು ಹರಿದು ವಾಹನ ಸವಾರರು ಪರದಾಡಿದರು. ಇದರಿಂದಾಗಿ ಜನ ಜೀವನವೂ ಅಸ್ತವ್ಯಸ್ತವಾಯಿತು.
ಇದನ್ನೂ ಓದಿ: ಇಡೀ ರಾತ್ರಿ ಸುರಿದ ಮಳೆಗೆ ರಾಜಧಾನಿ ಹೈರಾಣ: ಕೆರೆಯಂತಾದ ರಸ್ತೆಗಳು; ಇನ್ನೂ ಮೂರು ದಿನ ಮುಂದುವರಿಯಲಿದೆ ವರುಣಾರ್ಭಟ