thumbnail

By ETV Bharat Karnataka Team

Published : Dec 24, 2023, 7:47 AM IST

Updated : Dec 24, 2023, 8:57 AM IST

ETV Bharat / Videos

ಬರೋಬ್ಬರಿ 5 ಕೆ.ಜಿ ತೂಕದ ನಿಂಬೆಹಣ್ಣು ಬೆಳೆದ ರೈತ- ವಿಡಿಯೋ

ಕೊಡಗು : ಜಿಲ್ಲೆಯ ಪಾಲಿಬೆಟ್ಟದ ತೋಟವೊಂದರಲ್ಲಿ ಅಪರೂಪದ ಗಜನಿಂಬೆ ಹಣ್ಣು ಬೆಳೆದಿದ್ದು, ಪ್ರತಿ ನಿಂಬೆಹಣ್ಣು ಕೂಡ ಸುಮಾರು 5 ಕೆ.ಜಿ ತೂಕ ಹೊಂದಿರುವುದು ವಿಶೇಷವಾಗಿದೆ. ಭಾರಿ ಗ್ರಾತ್ರದ ಗಜನಿಂಬೆಹಣ್ಣು ಕಂಡು ಕಾರ್ಮಿಕರು, ಸ್ಥಳೀಯ ರೈತರು ಬೆರಗಾಗಿದ್ದಾರೆ. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಮೂಕೊಂಡ ವಿಜು ಸುಬ್ರಮಣಿ ಅವರ ಕಾಫಿ ತೋಟದಲ್ಲಿ ಈ ನಿಂಬೆಹಣ್ಣು ಬೆಳೆದಿದೆ. ಆಚ್ಚರಿ ಎಂಬಂತೆ ಅಂದಾಜು 6 ಅಡಿ ಎತ್ತರದ ಗಿಡಗಳಲ್ಲಿ ಸಣ್ಣ ಗಾತ್ರದಿಂದ ಬರೋಬ್ಬರಿ 5 ಕೆ.ಜಿ ತೂಕದವರೆಗಿನ ನಿಂಬೆ ಹಣ್ಣುಗಳು ಬೆಳೆದಿವೆ.

ಈ ಬಗ್ಗೆ ಮಾತನಾಡಿದ ತೋಟದ ಮಾಲೀಕ ಮೂಕೊಂಡ ವಿಜು ಸುಬ್ರಮಣಿ ಅವರು, 'ನಾಲ್ಕು ವರ್ಷಗಳ ಹಿಂದೆ ಮೈಸೂರು ಮಾರುಕಟ್ಟೆಯಲ್ಲಿ ಸಿಟ್ರಸ್ ಹಣ್ಣು ಖರೀದಿ ಮಾಡಿ ತಂದಿದ್ದೆ. ಮನೆಯ ಹಿಂಬದಿಯ ತೋಟದಲ್ಲಿ ಬೀಜಗಳನ್ನು ಹಾಕಿದ್ದು, ಕೆಲ ದಿನಗಳ ಎರಡು ಸಸಿಗಳು ಬೆಳೆದಿದ್ದವು. ನಂತರ ಅವುಗಳನ್ನು ಕಿತ್ತು, ತೋಟದ ಬದಿಯಲ್ಲಿ ಸಾವಯವ ಗೊಬ್ಬರ ಬಳಸಿ ನೆಡಲಾಗಿತ್ತು. 3 ವರ್ಷಗಳ ಕಾಲ ಗಿಡ ಮಾತ್ರ ಬೆಳೆದರೂ, ಅದರಲ್ಲಿ ಹೂ, ಕಾಯಿಗಳು ಬಂದಿರಲಿಲ್ಲ. ಹಾಗಾಗಿ ಇದು ಯಾವ ಗಿಡ ಎಂದು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕೆಲ ತಿಂಗಳ ಹಿಂದೆ ಗಿಡದಲ್ಲಿ ಮಲ್ಲಿಗೆ ಹೂವಿನ ಆಕಾರದ ದೊಡ್ಡ ಹೂವುಗಳಾಗಿದ್ದು, ನಂತರ ಕಾಯಿಗಳಾದವು. ಕೆಲ ತಿಂಗಳ ನಂತರ ಅವು ದೊಡ್ಡದಾಗುತ್ತ ಭಾರಿ ಗಾತ್ರದಲ್ಲಿ ಬೆಳೆದುನಿಂತಿವೆ' ಎಂದರು.

ಇಟಲಿ, ಯೂರೋಪ್ ದೇಶಗಳಲ್ಲಿ ಅಪರೂಪಕ್ಕೆ ಕಂಡುಬರುವ ಈ ಗಜನಿಂಬೆ ಸಾಮಾನ್ಯವಾಗಿ ಎಲ್ಲ ತರಹದ ವಾತಾವರಣಕ್ಕೂ ಹೊಂದಿಕೊಂಡು ಬೆಳೆಯುತ್ತದೆ. ಇದರ ಹಣ್ಣು ಅಂಡಾಕಾರವಾಗಿದ್ದು, ಸಣ್ಣ ಬೀಜಗಳನ್ನು ಹೊಂದಿದೆ. ಹಣ್ಣುಗಳಲ್ಲಿ ಮಂದವಾದ ಸಿಪ್ಪೆ ಮತ್ತು ರಸಭರಿತ ತಿರುಳು ಇರುವುದರಿಂದ ಉಪ್ಪಿನಕಾಯಿ, ತಂಪಾದ ಪಾನೀಯಗಳ ತಯಾರಿಕೆಗೆ ಬಳಲಾಗುತ್ತದೆ. ಅಲ್ಲದೆ, ಹಲವು ಆರೋಗ್ಯಕರ ಉಪಯೋಗ ಹಾಗೂ ಔಷಧಿಗಳಿಗೂ ಬಳಕೆಯಾಗುತ್ತದೆ.

ಇದನ್ನೂ ಓದಿ : ಕೊಪ್ಪಳದಲ್ಲಿ ಬೆಳೆ ಹಾನಿ: ನಷ್ಟ ಪರಿಹಾರ ನೀಡುವಂತೆ ರೈತರ ಒತ್ತಾಯ

Last Updated : Dec 24, 2023, 8:57 AM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.