ರಜಿನಿಕಾಂತ್ಗೆ ದೇವಸ್ಥಾನ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿದ ಅಭಿಮಾನಿ: ವಿಡಿಯೋ - ಕಾಲಿವುಡ್ ಸೂಪರ್ ಸ್ಟಾರ್
🎬 Watch Now: Feature Video
Published : Nov 2, 2023, 8:16 AM IST
ತಮಿಳುನಾಡು: ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ತಮಿಳು ನಟ ರಜಿನಿಕಾಂತ್ ಅವರಿಗೆ ಇಲ್ಲೊಬ್ಬ ಕಟ್ಟಾ ಅಭಿಮಾನಿ ವಿಶೇಷ ಉಡುಗೊರೆ ನೀಡಿದ್ದಾರೆ. ತಮಿಳುನಾಡಿನ ಮಧುರೈನಲ್ಲಿರುವ ತಮ್ಮ ಮನೆಯ ಆವರಣದಲ್ಲೇ 'ತಲೈವಾ'ಗೆ ದೇವಾಲಯ ಕಟ್ಟಿದ್ದಾರೆ. ಈ ದೇವಸ್ಥಾನದೊಳಗೆ 250 ಕೆ.ಜಿ ತೂಕದ ರಜಿನಿಕಾಂತ್ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
"ನಾನು ರಜನಿಕಾಂತ್ ಬಿಟ್ಟು ಬೇರಾವುದೇ ನಟರ ಸಿನಿಮಾ ನೋಡುವುದಿಲ್ಲ. ನನಗೆ ಅವರು ದೇವರು. ಹಾಗಾಗಿ ನಾನು ದೇವಸ್ಥಾನ ನಿರ್ಮಿಸಿದ್ದೇನೆ. ರಜಿನಿಕಾಂತ್ ಅವರನ್ನು ತುಂಬಾ ಪ್ರೀತಿಸುತ್ತೇನೆ. ನಮ್ಮ ಕುಟುಂಬದ ಐದು ತಲೆಮಾರುಗಳಿಂದಲೂ ನಾವು ರಜಿನಿಕಾಂತ್ ಅವರ ಅಭಿಮಾನಿಗಳು" ಎಂದು ಅಭಿಮಾನಿ ಕಾರ್ತಿಕ್ ತಿಳಿಸಿದರು.
ರಜನಿಕಾಂತ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಿರ್ದೇಶಕ: ನಟ ಟೊವಿನೋ ಥಾಮಸ್ ಮುಖ್ಯಭೂಮಿಕೆಯ '2018: ಎವ್ರಿಒನ್ ಈಸ್ ಎ ಹೀರೋ' ಮಲಯಾಳಂ ಚಿತ್ರವು ಆಸ್ಕರ್ 2024ರ ನಾಮನಿರ್ದೇಶನ ಪ್ರಕ್ರಿಯೆಗೆ ಇತ್ತೀಚೆಗೆ ಪ್ರವೇಶ ಪಡೆದಿತ್ತು. ಈ ಚಿತ್ರದ ಆಸ್ಕರ್ ಪ್ರಚಾರಕ್ಕಾಗಿ ನಿರ್ದೇಶಕ ಜೂಡ್ ಆಂಥೋನಿ ಜೋಸೆಫ್ ಇತ್ತೀಚೆಗೆ ರಜಿನಿಕಾಂತ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದರು. ಭೇಟಿಯ ಫೋಟೋಗಳನ್ನು ಜೂಡ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ರಜನಿಕಾಂತ್ - ಅಮಿತಾಭ್ ಬಚ್ಚನ್ ಸಿನಿಮಾ: ಮುಂಬೈ ಶೂಟಿಂಗ್ ಶೆಡ್ಯೂಲ್ ಕಂಪ್ಲೀಟ್