ಮಂಡ್ಯದಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು; ಮುಂದುವರೆದ ಕಾರ್ಯಾಚರಣೆ- ವಿಡಿಯೋ - ETV Bharat Karnataka
🎬 Watch Now: Feature Video


Published : Oct 2, 2023, 9:37 PM IST
ಮಂಡ್ಯ : ಮಂಡ್ಯ ನಗರ ಸಮೀಪದಲ್ಲಿರುವ ಚಿಕ್ಕ ಮಂಡ್ಯದಲ್ಲಿ ರಾಮಕೃಷ್ಣ ಚಿತ್ರಮಂದಿರವಾಗಿದ್ದ ಕಟ್ಟಡದ ಹಿಂಬದಿಯ ಜಮೀನಿನಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿವೆ. ಆನೆಗಳನ್ನು ನೋಡಲು ಬೆಂಗಳೂರು ಮತ್ತು ಮೈಸೂರು ಬೈಪಾಸ್ ರಸ್ತೆ, ಮಂಡ್ಯ – ಚಿಕ್ಕಮಂಡ್ಯ ರಸ್ತೆಯಲ್ಲಿ ಜನರು ಸೇರಿದ್ದು, ಆನೆಗಳ ಹಿಂಡಿನತ್ತ ಜನರು ತೆರಳದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಇನ್ನೊಂದೆಡೆ, ಕಾಡಿನತ್ತ ಆನೆಗಳನ್ನು ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸುಮಾರು ಐದು ಕಾಡಾನೆಗಳು ಭಾನುವಾರ ಮಂಡ್ಯ ತಾಲ್ಲೂಕಿನ ಬೂದನೂರು ಬಳಿ ಹೊಲ, ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ್ದವು.
ಈಗಾಗಲೇ ಬರ ಪರಿಸ್ಥಿತಿ ನಡುವೆ ಬೆಳೆ ಕಳೆದುಕೊಂಡಿರುವ ರೈತರಿಗೆ ಕಾಡಾನೆಗಳು ಮತ್ತಷ್ಟು ಉಪಟಳ ನೀಡಿವೆ. ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳನ್ನು ಅವರು ಒತ್ತಾಯಿಸಿದ್ದಾರೆ. ಶಾಸಕ ಗಾಣಿಗ ರವಿಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ : ಮಂಡ್ಯ: ಕಬ್ಬಿನ ಗದ್ದೆಯಲ್ಲಿ ಕಾಡಾನೆಗಳ ಹಿಂಡು, ಕಾಡಿಗಟ್ಟಲು ಅರಣ್ಯಾಧಿಕಾರಿಗಳ ಹರಸಾಹಸ