ಬಿಸಿಲಿನ ಅಬ್ಬರದ ನಡುವೆಯೇ ಗಮನ ಸೆಳೆಯುವ ಆನೆಗಳ ಜಲಕ್ರೀಡೆ... - Elephants are fun
🎬 Watch Now: Feature Video
ತಮಿಳುನಾಡು: ಎಲ್ಲೆಡೆ ಬಿಸಿಲಿನ ಅಬ್ಬರ ಜೋರಾಗಿದೆ. ಬೇಸಿಗೆಯ ಆರಂಭದಲ್ಲೇ ಕೆಲವು ಕಡೆಗಳಲ್ಲಿ ಬರವೂ ಎದುರಾಗಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜಾನುವಾರುಗಳಿಗಾಗಿ ಬೇಸಿಗೆ ಶಿಬಿರ ಆಯೋಜಿಸಿರುವುದನ್ನು ಇಲ್ಲಿ ನೋಡಬಹುದು. ಹೌದು, ತಿರುಚ್ಚಿ ಬಳಿಯ ಎಂ.ಆರ್.ಪಾಳ್ಯಂನಲ್ಲಿ ಆನೆಗಳಿಗೆ ಶಿಬಿರ ಜರುಗುತ್ತಿದೆ. ಬಿಸಿಲಿನ ತಾಪದಿಂದ ಕಂಗಾಲಾಗಿರುವ ಆನೆಗಳು ನೀರಾಟದಲ್ಲಿ ತೊಡಗುವ ಮೂಲಕ ಖುಷಿಪಡುತ್ತಿವೆ.
ಮಾವುತರ ಆದೇಶದೊಂದಿಗೆ ಆನೆಗಳು ನೀರಿನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋಗಳು ಭಾರೀ ವೈರಲ್ ಆಗಿವೆ. ಸೂರ್ಯ ಶಿಕಾರಿಯಿಂದ ತಪ್ಪಿಕೊಳ್ಳಲು ಆನೆಗಳು ಜಲ ಕ್ರೀಡೆಯಲ್ಲಿ ಪಾಲ್ಗೊಂಡಿರುವ ದೃಶ್ಯಗಳು ವೀಕ್ಷಕರ ಗಮನವನ್ನು ಸೆಳೆದಿವೆ. ನೀರು ತುಂಬಿರುವ ಕೊಳದಲ್ಲಿ ದೊಡ್ಡ ಆನೆಗಳ ಜೊತೆಗೆ ಪುಟ್ಟ ಆನೆಯೊಂದು ಹೊರಳಾಡುವ ದೃಶ್ಯವಂತೂ ವೀಕ್ಷರ ಕಣ್ಣಿಗೆ ಮುದ ನೀಡುತ್ತದೆ. ಭಾರೀ ಬಿಸಿಲಿನ ಮಧ್ಯೆಯೇ ಆನೆಗಳು ಶವರ್ ಕೆಳಗೆ ಸ್ನಾನ ಮಾಡುತ್ತಿರುವ ದೃಶ್ಯಗಳು ಕೂಡಾ ಇವು.
ಎಂ.ಆರ್.ಪಾಳ್ಯಂ ಆನೆ ಶಿಬಿರದಲ್ಲಿರುವ 9 ಆನೆಗಳಿವೆ. ಅವುಗಳಿಗಾಗಿ ತಾತ್ಕಾಲಿಕ ನೀರಿನ ಡಬ್‌ಗಳು, ವೈದ್ಯಕೀಯ ಸೌಲಭ್ಯಗಳ ಲಭ್ಯತೆ, ಹಣ್ಣುಗಳು ಸೇರಿದಂತೆ ಆಹಾರ ಮತ್ತು ಇತರೆ ಸೌಕರ್ಯಗಳನ್ನು ಒದಗಿಸಲಾಗಿದೆ. ಅವುಗಳ ನಿರ್ವಹಣೆಯನ್ನು ಅರಣ್ಯಾಧಿಕಾರಿ ಸತೀಶ್ ಮತ್ತು ಅವರ ತಂಡದ ಸದಸ್ಯರ ಮೇಲಿದೆ.
ಇದನ್ನೂ ಓದಿ: ಮತ್ತೆ ಹಿಮಾಪಾತ: ಹಿಮಾವೃತಗೊಂಡ ಬರಿನಾಥ ಧಾಮ
ಇದನ್ನೂ ಓದಿ: ಸಿದ್ದಗಂಗಾ ಶಿವಕುಮಾರ ಶ್ರೀಗಳ ಜನ್ಮದಿನ.. 116 ಮಕ್ಕಳಿಗೆ ಸ್ವಾಮೀಜಿಯವರ ಹೆಸರು ನಾಮಕರಣ