ತಿರುಪತಿ ಬೆಟ್ಟದಲ್ಲಿ ಬೀಡುಬಿಟ್ಟ ಆನೆಗಳ ಹಿಂಡು.. ಬೆಚ್ಚಿಬಿದ್ದ ಭಕ್ತ ಸಮೂಹ - ಆಂಧ್ರಪ್ರದೇಶದ ತಿರುಮಲದಲ್ಲಿ ಆನೆಗಳು ಸಂಚಲನ
🎬 Watch Now: Feature Video
ಆಂಧ್ರಪ್ರದೇಶದ ತಿರುಮಲದಲ್ಲಿ ಆನೆಗಳು ಮತ್ತೊಮ್ಮೆ ಭಕ್ತರಲ್ಲಿ ಆತಂಕ ಮೂಡಿಸಿವೆ. ತಿರುಮಲದ ಮೊದಲ ಘಾಟ್ ರಸ್ತೆ ಬಳಿಯ ಆನೆ ಕಮಾನು ಅರಣ್ಯ ಪ್ರದೇಶದಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿವೆ. ಒಂದೇ ಬಾರಿಗೆ 7 ಆನೆಗಳು ಘಾಟ್ ರಸ್ತೆಗೆ ಬಂದಿದ್ದರಿಂದ ಭಕ್ತರು ಭಯಭೀತರಾದರು. ಮಾಹಿತಿ ಪಡೆದ ಟಿಟಿಡಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆನೆಗಳ ಹಿಂಡನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸಿದರು. ಕೆಲ ದಿನಗಳಿಂದ ಈ ಭಾಗದಲ್ಲಿ ಆನೆಗಳ ಓಡಾಟ ಹೆಚ್ಚಾಗಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ. ಇದೇ ಪ್ರದೇಶದ ಘಾಟ್ ರಸ್ತೆ ಬಳಿ ವಾರದಲ್ಲಿ ಎರಡನೇ ಬಾರಿ ಆನೆಗಳ ಹಿಂಡು ಕಂಡುಬಂದಿವೆ.
Last Updated : Feb 3, 2023, 8:24 PM IST