ದತ್ತಪೀಠದ ಸಮೀಪದಲ್ಲಿ ಕಾಡಾನೆಗಳು ಪ್ರತ್ಯಕ್ಷ: ಪ್ರವಾಸಿಗರಲ್ಲಿ ಆತಂಕ ಸೃಷ್ಟಿ..
🎬 Watch Now: Feature Video
ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕಾಡು ಪ್ರಾಣಿಗಳ ಭೀತಿ ಶುರುವಾಗಿದೆ. ದತ್ತಪೀಠ, ಮುಳ್ಳಯ್ಯ ಗಿರಿಯ ತಪ್ಪಲಿನಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಸ್ಥಳೀಯರಲ್ಲಿ ಆತಂಕ ಕಾಡುತ್ತಿದೆ. ಮೊನ್ನೆ ಹುಲಿ ಕಾಣಿಸಿಕೊಂಡು ಆಂತಕ ಮೂಡಿಸಿದ್ರೆ, ಇಂದು ಕಾಡಾನೆಗಳು ಪ್ರತ್ಯಕ್ಷವಾಗಿ ಕೆಲಕಾಲ ಭಯದ ವಾತಾರಣವನ್ನು ಸೃಷ್ಟಿಯಾಗಿತ್ತು.
ದತ್ತ ಪೀಠದ ಸಮೀಪ ಎರಡು ಕಾಡಾನೆಗಳು ಕಾಣಿಸಿಕೊಂಡಿರುವುದು ಪ್ರವಾಸಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗಾಳಿಕೆರೆಗೆ ತೆರಳುವ ಮಾರ್ಗದಲ್ಲಿ ಎರಡು ಕಾಡಾನೆಗಳು ರಸ್ತೆಯಲ್ಲಿ ನಿಂತಿದ್ದವು. ಸ್ಥಳೀಯರ ಯುವಕರು ಹಾಗೂ ಪ್ರವಾಸಿಗರು ಗಮನಿಸಿ ಕೂಗಾಟ ನಡೆಸಿದ್ದರಿಂದ ರಸ್ತೆಯಿಂದ ಶೋಲಾ ಅರಣ್ಯದ ಕಡೆಗೆ ತೆರಳಿದ್ದು, ಕೆಲ ಹೊತ್ತು ಅಲ್ಲೇ ಓಡಾಟ ನಡೆಸಿ ನಂತರ ಮರಗಳಿರುವ ಸ್ಥಳಕ್ಕೆ ಆನೆಗಳು ತೆರಳಿದೆ. ಆನೆಗಳು ಆಹಾರ ಅರಸಿ ಬಂದಿರುವ ಸಾಧ್ಯತೆಯಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೊನ್ನೆ ಮುಳ್ಳಯ್ಯ ಗಿರಿಯ ಪಂಡರವಳ್ಳಿಯಲ್ಲಿ ಹುಲಿ ದಾಳಿ ಮಾಡಿದ್ದರಿಂದ ಕಾರ್ಮಿಕರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ದತ್ತ ಪೀಠದ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಂಡ ಉದಾಹರಣೆಗಳು ಬಹಳ ವಿರಳ. ಮಳೆ ಅಭಾವ, ಆಹಾರದ ಕೊರತೆ, ಮುಂಗಾರು ಪ್ರಾರಂಭ ವಿಳಂಬವಾಗಿರುವ ಹಿನ್ನೆಲೆಯಲ್ಲಿ ದಟ್ಟ ಅರಣ್ಯದಿಂದ ಈ ಭಾಗಕ್ಕೆ ವಲಸೆ ಬಂದಿರಬಹುದು. ಗಾಳಿಕೆರೆ ಮಾರ್ಗದ ರಸ್ತೆಯಲ್ಲಿ ನಿಂತಿದ್ದನ್ನು ನೋಡಿ ಭಯವಾಗುತ್ತಿತ್ತು. ಚಿರಾಟ, ಕೂಗಾಟ ನಡೆಸಿದ್ದರಿಂದ ರಸ್ತೆಯಿಂದ ಕಾಡಿನತ್ತ ತೆರಳಿದವು. ಅರಣ್ಯ ಇಲಾಖೆ ಕಾಡಾನೆಗಳನ್ನು ಓಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಇದನ್ನೂ ಓದಿ: Davanagere: ರೈತರ ಜಮೀನುಗಳಲ್ಲಿ ಕಾಣಿಸಿಕೊಂಡ ದೈತ್ಯ ಕಾಡುಕೋಣ: ವಿಡಿಯೋ