ಆಹಾರ ಅರಸಿ ಬಂದಿದ್ದ ಗಂಡಾನೆ ವಿದ್ಯುತ್ ತಂತಿಗೆ ಸಿಲುಕಿ ಸಾವು: ವಿಡಿಯೋ - male elephant killed
🎬 Watch Now: Feature Video
ಧರ್ಮಪುರಿ (ತಮಿಳುನಾಡು): ವಿದ್ಯುತ್ ತಂತಿ ಸ್ಪರ್ಶದಿಂದ ಆನೆಯೊಂದು ಮೃತಪಟ್ಟ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ. ಆನೆ ವಿದ್ಯುತ್ ತಂತಿಗೆ ಸಿಕ್ಕಿ ಸಾವನ್ನಪ್ಪಿರುವ ದೃಶ್ಯವನ್ನು ಸ್ಥಳೀಯ ಯುವಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧರ್ಮಪುರಿ ಜಿಲ್ಲೆಯಲ್ಲಿ ಕಾಡಿನಿಂದ ಆಹಾರ ಅರಸಿ ಗಂಡಾನೆಯೊಂದು ಬಂದಿತ್ತು. ಇಲ್ಲಿನ ಕಂಬಿನಲ್ಲೂರು ಸಮೀಪದ ಕೆಲವಳ್ಳಿ ಪ್ರದೇಶದಲ್ಲಿ ಆನೆ ಸುತ್ತಾಡಿದೆ. ಈ ವೇಳೆ ಹೊಲಗಳಲ್ಲಿ ಸಂಚರಿಸುತ್ತಿದ್ದ ಆನೆ ಪಕ್ಕದ ಕೆರೆಯತ್ತ ಹೊರಟಿದೆ. ಈ ವೇಳೆ ನೆಲಕ್ಕೆ ಹತ್ತಿರದಲ್ಲಿದ್ದ ವಿದ್ಯುತ್ ತಂತಿ ತಗುಲಿದೆ. ಇದರ ಪರಿಣಾಮ ಆನೆ ಸ್ಥಳದಲ್ಲೇ ಕುಸಿದು ಬಿದ್ದಿದೆ. ಅದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜನರು ಗಮನಿಸಿ, ಧಾವಿಸಿದ್ದಾರೆ. ಅಲ್ಲದೇ, ಕೆಲವರು ಆನೆಗೆ ವಿದ್ಯುತ್ ತಂತಿ ತಲುಗಿದ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ.
ಮಾರ್ಚ್ 8ರಂದು ಮೂರು ಕಾಡಾನೆಗಳು ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಇದೇ ಧರ್ಮಪುರಿ ಜಿಲ್ಲೆಯ ಪಾಲಕೋಡ್ ಬಳಿ ಸಮೀಪ ವರದಿಯಾಗಿತ್ತು. ಈ ಘಟನೆಯಲ್ಲಿ ಬದುಕುಳಿದ ಎರಡು ಮರಿಗಳನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಯ ಸಿಬ್ಬಂದಿ ಮುದುಮಲೈಗೆ ಸ್ಥಳಾಂತರಿದ್ದರು. ಇದೀಗ ಕೆಲವಳ್ಳಿ ಗ್ರಾಮದಲ್ಲಿ ಗಂಡಾನೆ ವಿದ್ಯುತ್ ತಂತಿಗೆ ಸಿಲುಕಿ ಬಲಿಯಾಗಿದೆ.
ಇದನ್ನೂ ಓದಿ: ಕೂದಲೆಳೆ ಅಂತರದಲ್ಲಿ ರೈಲು ಡಿಕ್ಕಿಯಿಂದ ಆನೆ ಪಾರು.. ವಿಡಿಯೋ