ನವಾರಿ ಸೀರೆ ಧರಿಸಿ ಎತ್ತರದ ಪರ್ವತ ಏರಿದ 8ರ ಬಾಲೆ - Etv Bharat Kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17573003-thumbnail-3x2-vny.jpg)
ಥಾಣೆ (ಮಹಾರಾಷ್ಟ್ರ): 8 ವರ್ಷದ ಬಾಲಕಿ ನವಾರಿ ಸೀರೆ ಧರಿಸಿ ಇಲ್ಲಿಯ ಜೀವಧನ್ ಕೋಟೆಯ ಎತ್ತರದ ಪರ್ವತವನ್ನು ಹತ್ತಿ ಜಿಪ್ ಲೈನಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ. ಗೃಹಿತಾ ವಿಚಾರೆ ಎಂಬ ಬಾಲಕಿ ಈ ಸಾಸಹವನ್ನು ಮಾಡಿದ್ದಾಳೆ. ಸುಮಾರು 400ರಿಂದ 450 ಅಡಿಯ ಎತ್ತರದ ಪರ್ವತದಲ್ಲಿ ಜಿಪ್ ಲೈನಿಂಗ್ ಮಾಡಿದ್ದಾಳೆ. ಅಲ್ಲದೇ ಬಾಲಕಿಯೊಂದಿಗೆ ಅವರ ಸಹೋದರಿ ಹರಿತಾ ವಿಚಾರೆ ಕೂಡ ನವಾರಿ ಸ್ಯಾರಿಯನ್ನು ತೊಟ್ಟು ಜಿಪ್ ಲೈನಿಂಗ್ ಮಾಡಿದ್ದಾರೆ. ಈ ಇಬ್ಬರ ಸಾಹಸಕ್ಕೆ ಜನರು ಮನ ಸೋತಿದ್ದು ಅಭಿನಂದನೆ ತಿಳಿಸಿದ್ದಾರೆ.
ಅವರ ತಂದೆಯಿಂದ ಪರ್ವತಾರೋಹಣದ ತರಬೇತಿಯನ್ನು ಪಡೆದಿರುವ ಇಬ್ಬರು ಸಹೋದರಿಯರು, ಯಾವುದೇ ಬೆಟ್ಟಗಳನ್ನು ಸುಲಭವಾಗಿ ಹತ್ತುತ್ತಾರೆ. ಇನ್ನು, ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಅತ್ಯಂತ ಕಿರಿಯ ಮಹಾರಾಷ್ಟ್ರದ ಬಾಲಕಿ ಎಂಬ ಹೆಗ್ಗಳಿಕೆಗೂ ಗೃಹಿತಾ ಪಾತ್ರರಾಗಿದ್ದಾರೆ. ತಂದೆ ಸಚಿನ್ ಅವರೊಂದಿಗೆ ಮೌಂಟ್ ಎವರೆಸ್ಟ್ ಏರಲು ಇಬ್ಬರು ಸಹೋದರಿಯರು ತೆರಳಿದ್ದರು. ಅವರೊಟ್ಟಿಗೆ ಎತ್ತರದ ಮೌಂಟ್ ಎವರೆಸ್ಟ್ ಪರ್ವಾತಾರೋಹಣ ಆರಂಭಿಸಿದರು.
ಸುಮಾರು 3680 ಮೀಟರ್ ಕ್ರಮಿಸಿದ ನಂತರ ಹರಿತಾ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹರಿತಾ ಅರ್ಧಕ್ಕೆ ಅಲ್ಲಿಂದ ಹಿಂದಿರುಗುತ್ತಾರೆ. ಇನ್ನು, ಗೃಹಿತಾ ತಂದೆ ಸಚಿನ್ ವಿಚಾರೆ ಅವರೊಂದಿಗೆ 13 ದಿನಗಳ ಕಾಲ ಪ್ರಯಾಣಿಸಿ ಎತ್ತರದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ನ್ನು ತಲುಪುವ ಮೂಲಕ ಯಶಸ್ವಿಯಾಗುತ್ತಾರೆ. ಈವರೆಗೂ ಗೃಹಿತಾ ಮತ್ತು ಹರಿತಾ ಇಬ್ಬರು ಸುಮಾರು 18ಕ್ಕೂ ಹೆಚ್ಚು ಎತ್ತರದ ಪರ್ವತಗಳ ಟ್ರಕ್ಕಿಂಗ್ ಮಾಡಿದ್ದು, ಮಹಾರಾಷ್ಟ್ರದ ಎತ್ತರದ ಶಿಖರಗಳಲ್ಲೊಂದಾದ ಕಲ್ಸುಬಾಯಿ ಶಿಖರ, ಕರ್ನಾಲ್, ವಿಶಾಲಗಡ್, ಗೋಪಾಲ್ಗಡ್, ಸುವರ್ಣ ದುರ್ಗ ಮತ್ತು ಇತರೆ ಕೋಟೆಗಳ ಶಿಖರಗಳನ್ನು ಹತ್ತಿದ್ದಾರೆ ಎಂದು ತಂದೆ ಸಚಿನ್ ತಿಳಿಸಿದ್ದಾರೆ.
ಇದನ್ನೂ ಓದಿ: ದೇವಸ್ಥಾನದ ಆನೆಗಾಗಿ 8.40 ಲಕ್ಷ ರೂ ವೆಚ್ಚದ ಈಜುಕೊಳ ನಿರ್ಮಾಣ..