13 ಗಂಟೆ ಶೋಧ ಕಾರ್ಯಾಚರಣೆ... ತಮಿಳುನಾಡು ಸಚಿವರನ್ನು ಚೆನ್ನೈ ಕಚೇರಿಗೆ ಕರೆದೊಯ್ದ ಇಡಿ - ಚೆನ್ನೈ ಕಚೇರಿಗೆ ಕರೆದೊಯ್ದಿದ ಇಡಿ
🎬 Watch Now: Feature Video
ಚೆನ್ನೈ(ತಮಿಳುನಾಡು): ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಅವರ ಮನೆಯನ್ನು ಸೋಮವಾರ ಸುಮಾರು 13 ಗಂಟೆಗಳವರೆಗೆ ಇಡಿ ಅಧಿಕಾರಿಗಳು ಶೋಧಿಸಿದರು. ನಂತರ, 2012ರ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕೆ.ಪೊನ್ಮುಡಿ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ತಮ್ಮ ಚೆನ್ನೈ ಕಚೇರಿಗೆ ಕರೆದೊಯ್ದರು.
ಇಡಿ ಸೋಮವಾರ ಚೆನ್ನೈನ ಪೊನ್ಮುಡಿಯ ಮನೆ ಮತ್ತು ಅವರ ಪುತ್ರನ ಚೆನ್ನೈನ ಸೈತಪೆಟ್ಟೈ ಮತ್ತು ವಿಲ್ಲುಪುರಂನ ಷಣ್ಮುಗಪುರಂನಲ್ಲಿರುವ ಸಚಿವ ಪೊನ್ಮುಡಿ ಅವರ ನಿವಾಸಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೇ, ವಿಲ್ಲುಪುರಂ ವಿಕ್ರವಾಂಡಿಯಲ್ಲಿರುವ ಸೂರ್ಯ ಟ್ರಸ್ಟ್‌ಗೆ ಸೇರಿದ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‌ನಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಬಂದೂಕುಗಳೊಂದಿಗೆ ಶಸ್ತ್ರಸಜ್ಜಿತವಾದ ಕೇಂದ್ರೀಯ ಮೀಸಲು ಪಡೆಯ ರಕ್ಷಣೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.
ದಾಳಿಯ ನಂತರ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಇಡಿ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಈ ಎಲ್ಲಾ ದಾಳಿಗಳನ್ನು ಜನರು ಗಮನಿಸುತ್ತಿದ್ದಾರೆ ಮತ್ತು ಇದರ ಹಿಂದಿನ ಉದ್ದೇಶ ಅವರಿಗೆ ತಿಳಿದಿದೆ ಎಂದು ಸ್ಟಾಲಿನ್ ಗರಂ ಆದರು.
ಇದನ್ನೂ ಓದಿ: ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ವಿಚಾರಣೆಗೆ ಒಳಪಡಿಸಿದ ATS