ದ್ವಾರಕಾದ ಹರ್ಷದ್ ಬಂದರ್‌ನಲ್ಲಿ ಮೆಗಾ ಡೆಮಾಲಿಷನ್: 4 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಒತ್ತುವರಿ ಮುಕ್ತ - Harshad sea area

🎬 Watch Now: Feature Video

thumbnail

By

Published : Mar 14, 2023, 8:31 PM IST

ದ್ವಾರಕಾ( ಗುಜರಾತ್)​ : ದೇವಭೂಮಿ ದ್ವಾರಕಾದಲ್ಲಿರುವ ಹರ್ಷದ್ ಬಂದರ್‌ನಲ್ಲಿಂದು 250 ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿ 4 ಕೋಟಿ ಮೌಲ್ಯದ ಸರಕಾರಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಇಂದು ರೇಂಜ್ ಐಜಿ ಸೇರಿದಂತೆ ಹಿರಿಯ ಅಧಿಕಾರಿಗಳು ಕ್ರಮವನ್ನು ಪರಿಶೀಲಿಸಿದರು. 

ಯಾತ್ರಾಧಾಮ ಹರ್ಷದ್‌ನಲ್ಲಿ 3 ದಿನಗಳಿಂದ ನಡೆಯುತ್ತಿರುವ ಬಹುತೇಕ ಮೆಗಾ ಡೆಮಾಲಿಷನ್ ಪ್ರಕ್ರಿಯೆಗಳು ಮುಕ್ತಾಯದ ಹಂತದಲ್ಲಿವೆ. ಮೂರನೇ ದಿನವಾದ ಇಂದು ಕಟ್ಟಡಗಳನ್ನು ಒಡೆದು ಸಂಗ್ರಹಿಸಿದ ಅವಶೇಷಗಳನ್ನು ಮೇಲೆತ್ತುವ ಪ್ರಕ್ರಿಯೆ ನಡೆದಿದೆ. ಹರ್ಷದ್ ಬಂದರಿನಲ್ಲಿನ ಅಕ್ರಮ ನಿರ್ಮಾಣ ತೆರವುಗೊಳಿಸಿದ ನಂತರ ಹರ್ಷದ್ ಸಮುದ್ರ ಪ್ರದೇಶದಲ್ಲಿ ಭಗ್ನಾವಶೇಷಗಳಿಂದ ತುಂಬಿದ ದೊಡ್ಡ ಬಯಲು ಕಂಡು ಬಂದಿದೆ. ಇದು ಡ್ರೋನ್ ದೃಶ್ಯಗಳಲ್ಲಿಯೂ ಕಂಡುಬಂದಿದೆ. ಪೊಲೀಸ್ ಮತ್ತು ಕಂದಾಯ ಇಲಾಖೆಯ ಶ್ರಮಕ್ಕೆ ಯಶಸ್ಸು ಸಿಗುತ್ತಿದೆ. ಮೂರು ದಿನಗಳಿಂದ ಮೆಗಾ ಡೆಮಾಲಿಷನ್ ಶಾಂತಿಯುತವಾಗಿ ನಡೆಯುತ್ತಿದೆ.

ಒತ್ತುವರಿ ತೆರವು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು: ರೇಂಜ್ ಐಜಿ ಅಶೋಕ್ ಯಾದವ್ ಯಾತ್ರಾಧಾಮ ಹರ್ಷದ್‌ನಲ್ಲಿ ನಡೆಯುತ್ತಿರುವ ಮೆಗಾ ಡೆಮಾಲಿಷನ್​​ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ವಿಧ್ವಂಸಕ ಕೃತ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಧ್ವಂಸ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಮಾಮಲದಾರ್ ಹಾಗೂ ಡಿವೈಎಸ್​ಪಿ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ವಿವಿಧ ಧ್ವಂಸ ಸ್ಥಳಗಳಿಗೆ ರೇಂಜ್ ಐಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಭದ್ರತೆಯ ಉದ್ದೇಶದಿಂದ ಒತ್ತುವರಿ ತೆರವು ಅಗತ್ಯ: ಡಿವೈಎಸ್ಪಿ ಸಮೀರ್ ಶಾರದಾ ಮಾತನಾಡಿ, ಮೂರನೇ ದಿನದ ಒತ್ತುವರಿ ತೆರವು ಕಾರ್ಯಾಚರಣೆಯ ಅಂತ್ಯದಲ್ಲಿ ಎಸ್ಪಿ ನಿತೀಶ್ ಪಾಂಡೆ ನೇತೃತ್ವದಲ್ಲಿ 2 ಡಿಎಸ್ಪಿಗಳು, ಸುಮಾರು 20 ಪಿಐಗಳು ಮತ್ತು ಸುಮಾರು 800 ಪೊಲೀಸ್ ಸಿಬ್ಬಂದಿ, 250 ಕ್ಕೂ ಹೆಚ್ಚು ಮನೆಗಳನ್ನು ಬುಲ್ಡೋಜರ್​ಗಳಿಂದ ಡೆಮೋಲಿಷನ್​​ ಮಾಡಲಾಯಿತು. ಈ ಒತ್ತುವರಿ ತೆರವಿಗೆ ಕಾರಣ ವಿವರಿಸಿದ ಅವರು, ಸರ್ಕಾರಿ ಭೂಮಿಯಲ್ಲಿ ಇಷ್ಟೆಲ್ಲ ನಿರ್ಮಾಣ ಮಾಡಲಾಗಿದ್ದು, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಭಾಗದ ಸಮುದ್ರ ತೀರ ಮಹತ್ವದ್ದಾಗಿರುವುದರಿಂದ ಈ ಒತ್ತುವರಿ ತೆರವು ಅಗತ್ಯ ಎಂದರು.

ಇದನ್ನೂ ಓದಿ :  ಮಳೆಬಿಲ್ಲಿನಂತೆ ಮಿನುಗುವ ಚಿಕ್ಕ ಪಾರದರ್ಶಕ ಮೀನು: ಕಾರಣ ಪತ್ತೆ ಹಚ್ಚಿದ ಸಂಶೋಧಕರು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.