ಬೆಟ್ಟದ ದೇವಿರಮ್ಮನ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ - ಡ್ರೋನ್ ವಿಡಿಯೋ ನೋಡಿ - ಬಿಂಡಿಗಾ ಗ್ರಾಮದ ದೇಗುಲ
🎬 Watch Now: Feature Video
Published : Nov 14, 2023, 8:16 PM IST
ಚಿಕ್ಕಮಗಳೂರು: ವರ್ಷಕ್ಕೊಮ್ಮೆ ದೀಪಾವಳಿ ಹಬ್ಬಕ್ಕೆ ಬಾಗಿಲು ತೆರೆಯುವ ಬೆಟ್ಟದ ದೇವಿರಮ್ಮನ ದರ್ಶನವನ್ನು ಸಾವಿರಕ್ಕೂ ಅಧಿಕ ಭಕ್ತರು ಪಡೆದಿದ್ದು ಬೆಟ್ಟಕ್ಕೆ ಹತ್ತಿ ಇಳಿಯುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3,800 ಅಡಿಯಷ್ಟು ಎತ್ತರದಲ್ಲಿ ಪಿರಮಿಡ್ ಆಕಾರದಲ್ಲಿರುವ ಬೆಟ್ಟದ ಡ್ರೋನ್ ವಿಡಿಯೋ ನೋಡಿದರೆ ಮೈ ರೋಮಾಂಚನಗೊಳ್ಳುತ್ತದೆ. ಬೆಟ್ಟದ ತುಂಬೆಲ್ಲಾ ಹಚ್ಚಹಸಿರಿನಿಂದ ಕಂಗೊಳಿಸೋ ಪ್ರಕೃತಿಯ ರಾಶಿ. ಗುಡ್ಡದ ತುತ್ತ ತುದಿಯಲ್ಲೊಂದು ಸಣ್ಣ ದೇಗುಲ. ಗುಡಿಯೊಳಗಿರುವ ದೇವಿಯನ್ನು ನೋಡಲು ಬರುವ ಸಾವಿರಾರು ಭಕ್ತರು. ತಾಯಿ ದರುಶನಕ್ಕಾಗಿ ಬರಿಗಾಲಲ್ಲಿ ಭಕ್ತರು ದಾರಿಯಿಲ್ಲದ ಗುಡ್ಡದಲ್ಲಿ ನಡೆದು ಬರುವ ದೃಶ್ಯವಂತೂ ನೋಡುಗರ ಮೈ ಜುಮ್ಮೆನಿಸುತ್ತದೆ.
ವರ್ಷಪೂರ್ತಿ ಬಿಂಡಿಗಾ ಗ್ರಾಮದ ದೇಗುಲದಲ್ಲಿ ದರ್ಶನ ನೀಡುವ ದೇವೀರಮ್ಮ ದೀಪಾವಳಿ ಅಮಾವಾಸ್ಯೆಯಿಂದ ಹಿಂದಿನ ದಿನ ಗುಡ್ಡದ ತುದಿಯಲ್ಲಿರೋ ದೇಗುಲದಲ್ಲಿ ದರ್ಶನ ನೀಡುತ್ತಾಳೆ. ಆಕೆಯನ್ನು ಗುಡ್ಡದ ಗುಡಿಯಲ್ಲಿ ನೋಡಲು ಕಾತರತೆಯಿಂದ ಕಾಯುವ ಭಕ್ತರು ಬಾಗಿಲು ತೆರೆಯುವ ದಿನ ದರ್ಶನ ಪಡೆದು ಪುನೀತರಾಗುತ್ತಾರೆ. ರಾತ್ರಿಯೇ ಬೆಟ್ಟ ಹತ್ತಲು ಶುರು ಮಾಡುವ ಭಕ್ತರು ಬೆಳಗಾಗುವಷ್ಟರಲ್ಲಿ ಗುಡ್ಡದ ತುದಿಯಲ್ಲಿ ಜಮಾಯಿಸಿರುತ್ತಾರೆ. ದೇವಿರಮ್ಮ ಜೊತೆ ಆ ಪ್ರಕೃತಿಯ ಆ ಸುಂದರ ತಾಣ, ತಣ್ಣನೆಯ ಗಾಳಿ ಬೆಟ್ಟ ಹತ್ತಿ ಆಗಿರುವ ಆ ಸುಸ್ತು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.
ಇದನ್ನೂ ಓದಿ: ಗಾಳಿ ರೂಪದಲ್ಲಿ ಗರ್ಭಗುಡಿ ಪ್ರವೇಶಿಸಿದ ದೇವಿರಮ್ಮ: ಪವಾಡವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು