ಬ್ರೇಕ್ ಬದಲು ಕ್ಲಚ್ ಅದುಮಿದ ಚಾಲಕ: ಕಾಲೇಜು ಕಾಂಪೌಂಡ್ ಒಡೆದು ನುಗ್ಗಿದ ಕಾರು- ವಿಡಿಯೋ - ಸಾಫ್ಟ್‌ವೇರ್ ಕಂಪನಿ
🎬 Watch Now: Feature Video
ಮಂಗಳೂರು: ಬ್ರೇಕ್ ಬದಲು ಕ್ಲಚ್ ಅದುಮಿ ಚಾಲಕನೊಬ್ಬ ಮಾಡಿದ ಎಡವಟ್ಟಿನಿಂದ ಕಾರೊಂದು ಕಾಲೇಜು ತಡೆಗೋಡೆಯನ್ನೇ ಒಡೆದು ಕಾಂಪೌಂಡ್ನೊಳಗೆ ನುಗ್ಗಿದ ಘಟನೆ ನಗರದ ಮಣ್ಣಗುಡ್ಡೆಯಲ್ಲಿ ನಡೆದಿದೆ.
ನಗರದ ಮಣ್ಣಗುಡ್ಡೆಯ ಗೋಕರ್ಣನಾಥ ಕಾಲೇಜು ಕಂಪೌಂಡ್ ಒಡೆದು ಈ ಕಾರು ಒಳನುಗ್ಗಿದೆ. ದಂಪತಿ ಕಾರಿನಲ್ಲಿದ್ದರು. ಚಾಲಕ ಪತಿ ಬ್ರೇಕ್ ಬದಲು ಕ್ಲಚ್ ಅದುಮಿದ್ದಾರೆ. ಪರಿಣಾಮ ಕಾರು ವೇಗವಾಗಿ ರಸ್ತೆ ಬಿಟ್ಟು ಸಂಚರಿಸಿ ಕಾಲೇಜು ಕಾಂಪೌಂಡ್ ಒಡೆದು ನುಗ್ಗಿ ಬಿಟ್ಟಿದೆ. ಈ ವೇಳೆ ಕಾರು ಕಾಂಪೌಂಡ್ನೊಳಗೆ ಸಿಲುಕಿದೆ. ಘಟನೆಯಿಂದ ಕಾರಿನಲ್ಲಿದ್ದವರು ಕಂಗಾಲಾಗಿದ್ದರು. ಕ್ರೇನ್ ಮೂಲಕವೇ ಕಾರನ್ನು ಅಲ್ಲಿಂದ ತೆರವುಗೊಳಿಸಲಾಯಿತು.
ಸ್ಕೂಟರ್ - ಲಾರಿ ನಡುವೆ ಅಪಘಾತ- ಸಾಫ್ಟ್‌ವೇರ್ ಉದ್ಯೋಗಿ ಸಾವು: ಮಂಗಳೂರಿನ ಪಂಪ್‌ವೆಲ್ ಬಳಿ ಟಿಪ್ಪರ್ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಗಾಯಾಳು ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇಚ್ಚಂಪಾಡಿ ಇಲ್ಲುಂಗಲ್ ನಿವಾಸಿ, ಸಾಫ್ಟ್‌ವೇರ್ ಉದ್ಯೋಗಿ ಸಂದೇಶ್ (25) ಸಾವನ್ನಪ್ಪಿದ ಯುವಕ.
ಸಂದೇಶ್ ಮಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಇವರು ರಾತ್ರಿ ಪಾಳಿ ಕೆಲಸ ಮುಗಿಸಿ ತಮ್ಮ ಸ್ಕೂಟಿಯಲ್ಲಿ ಮನೆಗೆ ತೆರಳುವ ವೇಳೆ ಪಂಪ್ವೆಲ್ನಲ್ಲಿ ಇಂದು ಬೆಳ್ಳಂಬೆಳಗ್ಗೆ 4 ಗಂಟೆಯ ವೇಳೆಗೆ ಈ ಅಪಘಾತ ನಡೆದಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂದೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಂದೇಶ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ನೋಡಿ: ತುಮಕೂರು: ಲಾರಿ–ಕಾರು ನಡುವೆ ಡಿಕ್ಕಿ.. ಇಬ್ಬರು ಸಾವು, ಐವರಿಗೆ ಗಂಭೀರ ಗಾಯ