ಹುಣಸೂರಿನ ಶಾಮಿಲ್ನಲ್ಲಿ ಜೋಡಿ ಕೊಲೆ ಪ್ರಕರಣ: ದೃಶ್ಯ ಸಿಸಿಟಿವಿಯಲ್ಲಿ ಸೆರೆ - Etv bharat kannada
🎬 Watch Now: Feature Video

ಮೈಸೂರು: ನಿನ್ನೆ ಹುಣಸೂರಿನ ಶಾಮಿಲ್ನಲ್ಲಿ ನಡೆದ ಜೋಡಿ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಜೋಡಿ ಕೊಲೆ ಚಿಲ್ಲರೆ ಕಾಸಿಗಾಗಿ ನಡೆದಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಪರಸಯ್ಯನ ಛತ್ರದ ಬಳಿಯ ಬಡಾವಣೆಯಲ್ಲಿ ಇರುವ ಎಸ್ಎನ್ ಶಾಮಿಲ್ನಲ್ಲಿ, ನಿನ್ನೆ ವೆಂಕಟೇಶ್ (75) ಹಾಗೂ ಮಾನಸಿಕವಾಗಿ ಸ್ವಲ್ಪ ಅಸ್ವಸ್ಥನಂತೆ ಇದ್ದ ಷಣ್ಮುಖ (65) ಎಂಬುವನನ್ನು, ಸೈಕೋ ವ್ಯಕ್ತಿಯೊಬ್ಬ ಚಿಲ್ಲರೆ ಹಣಕಾಸಿಗಾಗಿ ಕೊಲೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಅಡಿಷನಲ್ ಎಸ್ಪಿ ನಂದಿನಿ, ಬಂಧಿತ ವ್ಯಕ್ತಿ ಮಾದಕವಸ್ತುಗಳ ವ್ಯಸನಿಯಾಗಿದ್ದು, ಈತ ಈ ಹಿಂದೆ ಕಳ್ಳತನ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪ್ರತಿದಿನ ಶಾಮಿಲ್ಗೆ ಬಂದು ಹಣ ಕೊಡುವಂತೆ ತೊಂದರೆ ಕೊಡುತ್ತಿದ್ದ. ಈತ ಚಿಲ್ಲರೆ ಕಾಸಿಗಾಗಿ ಈ ಇಬ್ಬರನ್ನೂ ಕೊಲೆ ಮಾಡಿದ್ದಾನೆ. ಶಾಮಿಲ್ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಇಬ್ಬರನ್ನೂ ಕೊಲೆ ಮಾಡಿರುವ ದೃಶ್ಯ ಸೆರೆಯಾಗಿದೆ. ಈ ಆಧಾರದ ಮೇಲೆ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಗಾಂಜಾ, ಮದ್ಯಸೇವನೆ ಚಟ.. 8 ಜನರನ್ನು ಹತ್ಯೆ ಮಾಡಿದ್ದ ಸೈಕೋ ಕಿಲ್ಲರ್ ಬಂಧನ : ನಿಟ್ಟುಸಿರು ಬಿಟ್ಟ ಜನ