ಆಪ್ ಪಕ್ಷದ ರಾಜ್ಯ ನಾಯಕರ ಮುಂದೆಯೇ ಜಿಲ್ಲಾ ನಾಯಕನ ರಂಪಾಟ - ಶಿವಮೊಗ್ಗದ ಆಪ್ ನಾಯಕ ರಂಪಾಟ
🎬 Watch Now: Feature Video
ಇಂದು ಶಿವಮೊಗ್ಗಕ್ಕೆ ಆಪ್ ರಾಜ್ಯ ಉಪಾಧ್ಯಕ್ಷ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಆಗಮಿಸಿದ್ದ ವೇಳೆ ಶಿವಮೊಗ್ಗದ ಆಪ್ ನಾಯಕ ರಂಪಾಟ ನಡೆಸಿದ ಘಟನೆ ನಡೆದಿದೆ. ಇಂದು ಭಾಸ್ಕರ್ ರಾವ್ ಆಗಮಿಸುತ್ತಿರುವ ವಿಷಯ ನಮಗೆ ತಿಳಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ನಾನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆದರೆ, ನನಗೆಪಕ್ಷದ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ ಎಂದು ತಮ್ಮದೇ ಪಕ್ಷದವರ ವಿರುದ್ಧ ಕಿಶನ್ ಎಂಬವರು ಅಕ್ರೋಶ ಹೊರ ಹಾಕಿದ್ದಾರೆ. ಇತ್ತ ಕಿಶನ್ ಹೀಗೆ ಜೋರಾಗಿ ಮಾತನಾಡುತ್ತಿದ್ದಂತೆಯೇ ಭಾಸ್ಕರ್ ರಾವ್ ಅಲ್ಲಿಂದ ಕಾರಿನಲ್ಲಿ ಹೊರಟು ಹೋಗಿದ್ದಾರೆ. ಆದರೂ ತಮ್ಮ ಮಾತನ್ನು ನಿಲ್ಲಿಸದ ಕಿಶನ್ ನಮ್ ಪಕ್ಷದಲ್ಲಿ ಗುಂಪುಗಳಿವೆ. ಇದನ್ನು ಸರಿಪಡಿಸಬೇಕಾದ ರಾಜ್ಯ ನಾಯಕರು ಹಾಗೆ ಹೋದರೆ ಹೇಗೆ ಎಂದಿದ್ದಾರೆ.
Last Updated : Feb 3, 2023, 8:38 PM IST