ಚಿಕ್ಕೇನಕೊಪ್ಪದ ಶ್ರೀ ಶಿವಶಾಂತವೀರ ಶರಣರಿಂದ ದೀರ್ಘದಂಡ ನಮಸ್ಕಾರ - ಚಿಕ್ಕೇನಕೊಪ್ಪದ ಲಿಂಗೈಕ್ಯ ಚನ್ನವೀರ
🎬 Watch Now: Feature Video
ಕೊಪ್ಪಳ: ಕೊಪ್ಪಳ ಜಿಲ್ಲೆಯ ಗವಿಮಠ ಜಾತ್ರೆಯ ಎರಡನೇ ದಿನ, ಚಿಕ್ಕೇನಕೊಪ್ಪದ ಶ್ರೀ ಶಿವಶಾಂತವೀರ ಶರಣರಿಂದ ದೀರ್ಘದಂಡ ನಮಸ್ಕಾರ ಕಾರ್ಯಕ್ರಮ ಜರುಗಿತು. ಪ್ರತಿ ವರ್ಷ ಜಾತ್ರೆಯ ಎರಡನೇ ದಿನದಂದು ದೀರ್ಘದಂಡ ನಮಸ್ಕಾರ ಹಾಕುವುದು ಒಂದು ಪರಂಪರೆಯಾಗಿದ್ದು, ಚಿಕ್ಕೇನಕೊಪ್ಪದ ಲಿಂಗೈಕ್ಯ ಚನ್ನವೀರ ಶರಣರಿಂದ ಆರಂಭವಾದ ಈ ಪರಂಪರೆ, ಇಂದಿನ ಶ್ರೀಗಳಾದ ಶಿವಶಾಂತವೀರ ಶ್ರೀಗಳು ಮುಂದುವರೆಸಿಕೊಂಡು ಬಂದಿದ್ದಾರೆ. ಕೊಪ್ಪಳ ಗವಿಮಠದ ಮಹಾದ್ವಾರದಿಂದ ಹೂವಿನ ಹಾಸಿಗೆ ಮೇಲೆ ಶ್ರೀಗಳಿಂದ ದೀರ್ಘದಂಡ ನಮಸ್ಕಾರ ಜರುಗಿತು.
Last Updated : Feb 3, 2023, 8:38 PM IST