ಸೋಮಾವತಿ ಅಮಾವಾಸ್ಯೆ ಸ್ನಾನ 2023: ಹರಿದ್ವಾರದ ಸ್ನಾನಘಟ್ಟಗಳಲ್ಲಿ ಜನಜಂಗುಳಿ - ಗಂಗಾ ಸ್ನಾನಘಟ್ಟಗಳಲ್ಲಿ ಭಕ್ತರ ದಂಡು

🎬 Watch Now: Feature Video

thumbnail

By

Published : Feb 20, 2023, 1:37 PM IST

ಹರಿದ್ವಾರ: ಹಿಂದೂ ಧರ್ಮದಲ್ಲಿ ಸೋಮಾವತಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಸೋಮಾವತಿ ಅಮಾವಾಸ್ಯೆ ದಿನದಂದು ಶಿವ ಮತ್ತು ಪಾರ್ವತಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಈ ದಿನದಂದು ಗಂಗಾ ಸ್ನಾನ ಮತ್ತು ದಾನ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಜನರ ನಂಬಿಕೆ. ಮತ್ತೊಂದೆಡೆ, ಧರ್ಮನಗರಿ ಹರಿದ್ವಾರದಲ್ಲಿ ಸೋಮಾವತಿ ಅಮಾವಾಸ್ಯೆ ನಿಮಿತ್ತ ಬೆಳಗ್ಗೆಯಿಂದಲೇ ಗಂಗಾ ಸ್ನಾನಘಟ್ಟಗಳಲ್ಲಿ ಭಕ್ತರ ದಂಡು ಹರಿದು ಬಂದಿದ್ದು, ಗಂಗಾಸ್ನಾನ ಮಾಡಿ ಸುಖ  - ಸಮೃದ್ಧಿಗಾಗಿ ಪ್ರಾರ್ಥಿಸುವ ದೃಶ್ಯ ಕಂಡುಬಂದಿತು.  

ಪಂಡಿತ್ ಮನೋಜ್ ತ್ರಿಪಾಠಿ ನೀಡಿರುವ ಮಾಹಿತಿ ಪ್ರಕಾರ, ಸೋಮಾವತಿ ಅಮವಾಸ್ಯೆಯಂದು ಉಪವಾಸ ಮಾಡುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ. ಅದಕ್ಕಾಗಿಯೇ, ವರ್ಷವಿಡೀ ಭಕ್ತರು ಈ ಹಬ್ಬಕ್ಕಾಗಿ ಕಾತರದಿಂದ ಕಾಯುತ್ತಾರೆ. ಈ ಹಬ್ಬದಂದು ಪೂರ್ವಜರನ್ನು  ಸಹ ಪೂಜಿಸುವ ನಿಯಮವಿದೆ. ಜೊತೆಗೆ ಗಂಗಾಸ್ನಾನ ಮತ್ತು ದಾನ ಮಾಡುವುದರಿಂದ ವ್ರತದ ಫಲ ಹಲವು ಪಟ್ಟು ಹೆಚ್ಚಾಗುತ್ತದೆ. ಹೀಗಾಗಿ, ಅಧಿಕ ಸಂಖ್ಯೆಯಲ್ಲಿ ಭಕ್ತರು ಗಂಗಾಸ್ನಾನಕ್ಕೆ  ಆಗಮಿಸಿದ್ದಾರೆ ಎಂದರು.

ಇದನ್ನೂ ಓದಿ: ಗಂಗಾ ನದಿ ತಟದ ಶಿವಾಲಯದಲ್ಲಿ ಭಕ್ತರ ದಂಡು: ಭೋಲೆನಾಥನ ಜಪ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.