'ದೇವರಾಜ ಅರಸು ಪ್ರಶಸ್ತಿ': ಸಂತಸ ವ್ಯಕ್ತಪಡಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Aug 18, 2023, 8:39 PM IST

ಶಿವಮೊಗ್ಗ: ರಾಜ್ಯ ಸರ್ಕಾರ ನನ್ನನ್ನು ಗುರುತಿಸಿ ದೇವರಾಜ ಅರಸು ಪ್ರಶಸ್ತಿ ಘೋಷಿಸಿರುವುದು ಸಂತಸ ತಂದಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ಈ ಪ್ರಶಸ್ತಿಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಮುಖ್ಯ. ನನ್ನ ಕೊನೆಯ ಅವಧಿಯಲ್ಲಿ ಪ್ರಶಸ್ತಿ ಬಂದಿದೆ. ಇದರ ವಸ್ತು ಸ್ಥಿತಿಯನ್ನು ಜನರಿಗೆ ತಲುಪಿಸಬೇಕಿದೆ ಎಂದು ಹೇಳಿದರು. 

ತಂದೆಗೆ ಪ್ರಶಸ್ತಿ ದೊರೆತಿರುವುದಕ್ಕೆ ಹಿರಿಯ ಪುತ್ರಿ ಡಾ.ರಾಜನಂದಿನಿ ಹರ್ಷ ವ್ಯಕ್ತಪಡಿಸಿದ್ದಾರೆ. ಉಳುವವನೆ ಭೂ ಒಡೆಯ ಯೋಜನೆ 1974ರಲ್ಲಿ ಜಾರಿಗೆ ಬಂದಿತ್ತು. ಆಗ ನಾವೆಲ್ಲ ಸಣ್ಣ ಮಕ್ಕಳು. ಅದೇ ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಂಡಿದ್ದೆವು. ನಮ್ಮ ತಂದೆ ನೋವಿನಲ್ಲಿದ್ದರೂ ಸಹ ಆ ದುಃಖವನ್ನು ತಮ್ಮಲ್ಲಿಯೇ ಇಟ್ಟುಕೊಂಡು ರಾಜ್ಯ ಪ್ರವಾಸ ಮಾಡಿ ಗೇಣಿದಾರರಿಗೆ ಭೂ ಮಾಲೀಕರಾಗಲು ಅರ್ಜಿ ಹಾಕುವಂತೆ ತಿಳಿಸುತ್ತಿದ್ದರು. ಈ ಪ್ರಶಸ್ತಿ ಅವರಿಗೆ ಬಹಳ ಹಿಂದಿಯೇ ಬರಬೇಕಿತ್ತು. ಸರ್ಕಾರ ಈಗ ಅವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಜನರ ಆಶೀರ್ವಾದ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕಾಗೋಡು ತಿಮ್ಮಪ್ಪನವರನ್ನು ಸನ್ಮಾನಿಸಿದರು. ತೀರ್ಥಹಳ್ಳಿಯ ಕಾಂಗ್ರೆಸ್ ಮುಖಂಡರು ಜತೆಗಿದ್ದರು. 

ಇದನ್ನೂ ಓದಿ: ಆಪರೇಷನ್ ಹಸ್ತ ಟೀಕೆ: ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದೇನು?

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.