ಉತ್ತರಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಸದ್ದು​.. ರೇಪ್​ ಕೇಸ್​ ಆರೋಪಿಯ ನಿವಾಸ ಧ್ವಂಸ: ವಿಡಿಯೋ - love jihad accused residence collapse

🎬 Watch Now: Feature Video

thumbnail

By

Published : Jul 5, 2023, 2:57 PM IST

ಫತೇಹ್​ಪುರ: ಉತ್ತರಪ್ರದೇಶದಲ್ಲಿ ಬುಲ್ಡೋಜರ್ ಮತ್ತೆ ಸದ್ದು ಮಾಡಿದೆ. ಯುವತಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯ ಮನೆಯನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ. ಇತ್ತ ಅವರ ಕುಟುಂಬಸ್ಥರು ಕೋರ್ಟ್​ ಮುಂದೆ ಶರಣಾಗಿದ್ದಾರೆ.

ಜೂನ್​ 22 ರಂದು ಫತೇಹ್​ಪುರ ಜಿಲ್ಲೆಯ ಬಿಂಡ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಫರೀದ್‌ಪುರದಲ್ಲಿ ಕಲ್ಯಾಣ ಮಂಟಪದ ಹಿಂಭಾಗ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ 19 ವರ್ಷದ ಯುವತಿ ಪತ್ತೆಯಾಗಿದ್ದಳು. ಕುಟುಂಬಸ್ಥರು ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ತಪಾಸಣೆಯ ವೇಳೆ ಯುವತಿ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಜೂನ್ 26 ರಂದು ಸಾವನ್ನಪ್ಪಿದ್ದಳು. ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ, ಸಂತ್ರಸ್ತೆಯ ದೂರವಾಣಿ ಕರೆ ವಿವರಗಳನ್ನು ಪರಿಶೀಲಿಸಿ ಯುವಕನೊಬ್ಬನನ್ನು ಬಂಧಿಸಿದ್ದರು.

ಆರೋಪಿ ಯುವಕ ಸೋನು ಅಲಿಯಾಸ್ ಸಿಕಂದರ್, ಮೃತ ಯುವತಿ ಜೊತೆಗೆ ಪ್ರೇಮ ಸಂಬಂಧದಲ್ಲಿದ್ದ. ಆಕೆಯ ಮೇಲೆ ಅತ್ಯಾಚಾರ ಎಸಗಿ, ಅಸ್ವಸ್ಥ ಸ್ಥಿತಿಯಲ್ಲಿ ಬಿಟ್ಟು ಪರಾರಿಯಾಗಿದ್ದ. ಲವ್ ಜಿಹಾದ್ ಎಂದು ಆರೋಪಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.

ಇದಾದ ಬೆನ್ನಲ್ಲೇ, ಸ್ಥಳೀಯ ಆಡಳಿತ ಆರೋಪಿ ಮನೆಯನ್ನು ಬುಲ್ಡೋಜರ್‌ ಮೂಲಕ ಧ್ವಂಸ ಮಾಡಿದೆ. ಅಪರ ಜಿಲ್ಲಾಧಿಕಾರಿ ಅವಧೇಶ್ ನಿಗಮ್ ಮಾತನಾಡಿ, ಬಂಧಿತನ ವಿರುದ್ಧ ಸರಗಳ್ಳತನದ ಆರೋಪಗಳಿವೆ. ಅನಧಿಕೃತವಾಗಿ ಮನೆ ನಿರ್ಮಿಸಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದಿಢೀರ್‌ ಬಾಯ್ತೆರೆದ ದೆಹಲಿಯ ರಸ್ತೆ! ಅವ್ಯವಸ್ಥೆಗೆ ಸಾರ್ವಜನಿಕರ ಆಕ್ರೋಶ- ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.