ಉತ್ತರ ಭಾರತದಲ್ಲಿ 'ಕರ್ವಾ ಚೌತ್' ಆಚರಣೆ: ಕಲರ್‌ಫುಲ್ ಮೆಹೆಂದಿಯಲ್ಲಿ ಮಹಿಳೆಯರ ಸಂಭ್ರಮ- ವಿಡಿಯೋ
🎬 Watch Now: Feature Video
ನವದೆಹಲಿ: ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಇಂದು 'ಕರ್ವಾ ಚೌತ್' ಹಬ್ಬದ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಗಳಲ್ಲಿ ಮಹಿಳೆಯರು ತಮ್ಮ ಕೈ, ಕಾಲುಗಳಿಗೆ ವಿವಿಧ ವಿನ್ಯಾಸಗಳ ಮೆಹೆಂದಿ ಹಾಕಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕರ್ವಾ ಚೌತ್ ಹಬ್ಬದಲ್ಲಿ, ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಆಚರಿಸುತ್ತಾರೆ. ರಾತ್ರಿ ಚಂದ್ರನನ್ನು ನೋಡಿದ ನಂತರ ಉಪವಾಸ ಕೊನೆಗೊಳಿಸುತ್ತಾರೆ. ಈ 24 ಗಂಟೆಗಳ ಕಾಲ ನೀರನ್ನೂ ತೆಗೆದುಕೊಳ್ಳದೇ ಮಹಿಳೆಯರು ಉಪವಾಸ ಮಾಡುವರು. ಇದಕ್ಕೂ ಮೊದಲು ಮಹಿಳೆಯರು ಸಂಪೂರ್ಣ ಮೇಕ್ಅಪ್ ಮಾಡಿಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಹೊಸ ಬಟ್ಟೆಗಳೊಂದಿಗೆ, ಮೆಹಂದಿಯನ್ನು ಕೈ ಮತ್ತು ಪಾದಗಳಿಗೆ ಅನ್ವಯಿಸಿಕೊಳ್ಳುತ್ತಾರೆ.
ಕರ್ವಾ ಚೌತ್ ಹಬ್ಬದಲ್ಲಿ ವಿವಾಹಿತ ಮಹಿಳೆಯರು ತಮ್ಮ ಕೈ ಮತ್ತು ಕಾಲುಗಳಿಗೆ ಮೆಹೆಂದಿ ಅನ್ವಯಿಸುವುದು ಪದ್ಧತಿ. ಮೆಹೆಂದಿ ಮಾರಾಟಗಾರರೊಬ್ಬರು ಆಲ್ಬಮ್ ನೋಡಿ, ಮಹಿಳೆಯರ ನೆಚ್ಚಿನ ವಿನ್ಯಾಸದ ಮೆಹೆಂದಿಯನ್ನು ತಮ್ಮ ಕೈ ಮತ್ತು ಕಾಲುಗಳಿಗೆ ಹಚ್ಚುವ ದೃಶ್ಯಗಳು ಕಂಡುಬಂದವು. ಕರ್ವಾ ಚೌತ್ ವ್ರತದ ವೇಳೆ ಬಳಸುವ ಎಲ್ಲ ವಸ್ತುಗಳನ್ನು ಅಂಗಡಿಗಳಲ್ಲಿ ಮಾರಾಟಕ್ಕಿಡಲಾಗಿದೆ. ಮಣ್ಣಿನ ಮಡಕೆ, ಬಳೆಗಳು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳು ಮಾರುಕಟ್ಟೆಗಳಲ್ಲಿ ಕಂಡುಬಂದವು.
ಇದನ್ನೂ ಓದಿ: ಠಾಗೋರ್ ಕಡಲ ತೀರದಲ್ಲಿ ಮುಗಿಲೆತ್ತರ ಹಾರಾಡಿದ ನೂರಾರು ಹಳದಿ, ಕೆಂಪು ಗಾಳಿಪಟಗಳು