ಹಿಂದೂ ಮಹಾಸಭಾ ಕಾರ್ಯಕರ್ತರಿಂದ ಗೋಡ್ಸೆಯ ಪುಣ್ಯತಿಥಿ ಆಚರಣೆ - ಈಟಿವಿ ಭಾರತ ಕನ್ನಡ
🎬 Watch Now: Feature Video
ಗ್ವಾಲಿಯರ್ (ಮಧ್ಯಪ್ರದೇಶ): ಹಿಂದೂ ಮಹಾಸಭಾ ಕಾರ್ಯಕರ್ತರು ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯ ಪುಣ್ಯತಿಥಿಯನ್ನು ಆಚರಿಸಿದರು. ಗೋಡ್ಸೆ ಮತ್ತು ಸಹಚರ ನಾರಾಯಣ ಆಪ್ಟೆಯ ಭಾವಚಿತ್ರಕ್ಕೆ ಆರತಿ ಬೆಳಗಿದರು. ಈ ವೇಳೆ 'ನಾಥೂರಾಂ ಗೋಡ್ಸೆ ಜಿಂದಾಬಾದ್' ಮತ್ತು ವಂದೇ ಮಾತರಂ ಘೋಷಣೆ ಕೂಗಿದ್ದಾರೆ. ಹಿಂದೂ ಮಹಾಸಭಾದ ವಕ್ತಾರರಾದ ಅರ್ಚನಾ ಚೌಹಾಣ್ ಮಾತನಾಡಿ, ನಾವು ಗೋಡ್ಸೆಯವರನ್ನು ಕ್ರಾಂತಿಕಾರಿ ಎಂದು ಪರಿಗಣಿಸಿದ್ದೇವೆ. ಅಲ್ಲದೇ ಗ್ವಾಲಿಯರ್ ಮುನ್ಸಿಪಲ್ ಕಾರ್ಪೋರೇಶನ್ ನಗರದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಬಯಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
Last Updated : Feb 3, 2023, 8:32 PM IST