ದಾವಣಗೆರೆ: ನಾಳೆಯಿಂದ 2 ದಿನ ವೀರಶೈವ ಲಿಂಗಾಯತ ಮಹಾ ಅಧಿವೇಶನ, ಬೃಹತ್​ ವೇದಿಕೆ ಸಿದ್ಧ - ​ ETV Bharat Karnataka

🎬 Watch Now: Feature Video

thumbnail

By ETV Bharat Karnataka Team

Published : Dec 22, 2023, 9:47 PM IST

ದಾವಣಗೆರೆ: ನಾಳೆಯಿಂದ ಡಿ.23 ಮತ್ತು 24ರ ಎರಡು ದಿನ ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನ ನಡೆಯಲಿದೆ. ಇದಕ್ಕಾಗಿ ನಗರದ ಎಂಬಿಎ ಕಾಲೇಜಿನ ಮೈದಾನದಲ್ಲಿ ಸುಮಾರು 40 ಅಡಿ ಉದ್ದ, 120 ಅಡಿ ಅಗಲದ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. 

ಮಾಜಿ ಸಿಎಂಗಳಾದ ದಿ.ಎಸ್.ನಿಜಲಿಂಗಪ್ಪ ಹಾಗು ದಿ.ಜೆ.ಹೆಚ್ ಪಟೇಲ್ ಹೆಸರನ್ನು ವೇದಿಕೆಗೆ ಇಡಲಾಗಿದೆ. ಅಧಿವೇಶನಕ್ಕೆ ಅಂದಾಜು 2 ಲಕ್ಷ ಜನ ಸೇರುವ ಸಾಧ್ಯತೆ ಇದೆ. ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ. ಸಿದ್ದಗಂಗಾ ಮಠದ ಶ್ರೀ, ಹುಬ್ಬಳಿಯ ಮೂರು ಸಾವಿರ ಮಠದ ಶ್ರೀ ಉಪಸ್ಥಿತರಿರಲಿದ್ದಾರೆ. 

ಅಧಿವೇಶನವು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಾಲಿ, ಮಾಜಿ ಸಚಿವರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯನವರಿಗೆ ಆಮಂತ್ರಣ ನೀಡಲಾಗಿಲ್ಲ. 

ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಡೇಯ ದಿನ ವೀರಶೈವ ಲಿಂಗಾಯತ ಸಮಾಜವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವುದು, ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರ ಕೈಬಿಡಬೇಕೆಂಬ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.       

ಇದನ್ನೂ ಓದಿ: ಉಪಜಾತಿಗಳಿಗೆ ಸಿಗದ ಮೀಸಲು ಸೌಲಭ್ಯದ ಬಗ್ಗೆ ಗೊಂದ‌ಲ ಇದೆ: ಸಚಿವ ಎಂ ಬಿ ಪಾಟೀಲ್

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.