ಮೈಸೂರು ದಸರಾ 2022: ಗಜಪಡೆಯೊಂದಿಗೆ ಕಾವಾಡಿಗರ ಮಜ್ಜನ.. ವಿಡಿಯೋ - ಮೈಸೂರ ಗಜಪಡೆಗಳ ಸ್ನಾನದ ವಿಡಿಯೋ
🎬 Watch Now: Feature Video
ಮೈಸೂರು:ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದ ಸ್ನಾನ ಕೊಳದಲ್ಲಿ ಪ್ರತಿದಿನ ದಸರಾ ಗಜಪಡೆಗೆ ಮಜ್ಜನ ಮಾಡಿಸಲಾಗುತ್ತಿದ್ದು, ಇಂದು ಮಾವುತರು ಹಾಗೂ ಕಾವಾಡಿಗರು ತಮ್ಮ ಮಕ್ಕಳ ಸಮೇತವಾಗಿ ಗಜಪಡೆಯೊಂದಿಗೆ ಸ್ನಾನ ಮಾಡಿ ಸಂಭ್ರಮಪಟ್ಟರು. ನಿತ್ಯ ಬೆಳಗ್ಗೆ ಮತ್ತು ಸಂಜೆ ಗಜಪಡೆಗಳಿಗೆ ಅರಮನೆಯಿಂದ ಬನ್ನಿ ಮಂಟಪದ ವರೆಗೆ ತಾಲೀಮು ಮಾಡಿ, ಬಳಿಕ ಆಯಾಸಗೊಂಡ ಆನೆಗಳಿಗೆ ಸ್ನಾನದ ಮೂಲಕ ರಿಲ್ಯಾಕ್ಸ್ ಮಾಡಿಸಲಾಗುತ್ತದೆ. ಇಂದು ಗಜ ಪಡೆ ತಾಲೀಮು ಬಳಿಕ ಮಾವುತರು,ಕಾವಾಡಿಗರ ಮತ್ತು ಚಿಕ್ಕ ಮಕ್ಕಳು ಆನೆಗಳೊಂದಿಗೆ ಸ್ನಾನ ಮಾಡಿ ಗಮನ ಸೆಳೆದರು.
Last Updated : Feb 3, 2023, 8:27 PM IST