ಆನೇಕಲ್ನಲ್ಲಿ ದಸರಾ ಸಂಭ್ರಮ; ಜನಮನ ಸೆಳೆದ ಜಂಬೂಸವಾರಿ- ವಿಡಿಯೋ - ಜಂಬೂ ಸವಾರಿ ಉತ್ಸವ ಮೆರವಣಿಗೆ
🎬 Watch Now: Feature Video
Published : Oct 24, 2023, 10:24 PM IST
ಆನೇಕಲ್ (ಬೆಂಗಳೂರು):ವಿಜಯದಶಮಿ ಹಿನ್ನೆಲೆಯಲ್ಲಿ ಮೈಸೂರಿನ ವಿಶ್ವವಿಖ್ಯಾತ ಜಂಬೂ ಸವಾರಿಯನ್ನು ರಾಜ್ಯದ ಲಕ್ಷಾಂತರ ಜನರು ಕಣ್ತುಂಬಿಕೊಳ್ಳುವುದು ಒಂದೆಡೆಯಾದರೆ, ಪ್ರತಿ ವರ್ಷ ಮೈಸೂರು ಮಾದರಿಯ ಮಿನಿ ದಸರಾ ಬೆಂಗಳೂರಿನ ಹೊರವಲಯದ ಆನೇಕಲ್ನಲ್ಲಿ ನಡೆಯುತ್ತದೆ.
ನವರಾತ್ರಿ ಕೊನೆಯ ದಿನವಾದ ಮಂಗಳವಾರ ಅನೇಕಲ್ ಚೌಡೇಶ್ವರಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರು ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ನಂತರ ನಡೆದ ಆನೇಕಲ್‌ನ ಚೌಡೇಶ್ವರಿ ದೇವಿ ಪಲ್ಲಕ್ಕಿ ಹೊತ್ತು ಸಾಗುತ್ತಿರುವ ಜಂಬೂ ಸವಾರಿ ವೀಕ್ಷಿಸಲು ಸಾಗರೋಪಾದಿಯಲ್ಲಿ ಜನ ಸೇರಿದ್ದರು.
ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತು ಸಾಗಿದರು. ಚೌಡೇಶ್ವರಿ ದೇವಿ ಪಲ್ಲಕ್ಕಿ ಹೊತ್ತು ಸಾಗಿದ ಜಂಬೂ ಸವಾರಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಸಂಭ್ರಮಿಸಿದರು. ಜಾನಪದ ಕಲಾ ತಂಡಗಳಿಂದ ನೃತ್ಯ, ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ಮಂಗಲವಾದ್ಯಗಳು ಮೆರವಣಿಗೆಗೆ ಕಳೆ ತುಂಬಿದವು. 20 ರಿಂದ 30 ಕಲಾ ತಂಡಗಳು ಜಂಬೂ ಸವಾರಿ ಉತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ವೇದಿಕೆಯಲ್ಲಿ ಶಾಸಕ ಬಿ.ಶಿವಣ್ಣ, ಮಾಜಿ ಪುರಸಭಾಧ್ಯಕ್ಷ ಎನ್.ಎಸ್.ಪದ್ಮನಾಭ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಇದನ್ನೂಓದಿ: ಅರಮನೆಯಲ್ಲಿ ರಾಜ ವಂಶಸ್ಥರಿಂದ ಸಾಂಪ್ರದಾಯಿಕ ವಿಜಯ ದಶಮಿ ಪೂಜೆ: ವಿಡಿಯೋ