ಕ್ರಾಂತಿ ಸಿನಿಮಾಗೆ ಭರ್ಜರಿ ಸ್ವಾಗತ ಕೋರಿದ ದರ್ಶನ್ ಅಭಿಮಾನಿಗಳು - ಈಟಿವಿ ಭಾರತ ಕನ್ನಡ
🎬 Watch Now: Feature Video
ಕೊಪ್ಪಳ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಟ್ಯಾಬ್ಲೋಗೆ ಕೊಪ್ಪಳದಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ದರ್ಶನ್ ಅವರ ಬಹುನಿರೀಕ್ಷಿತ ಸಿನೆಮಾ ಕ್ರಾಂತಿ ಜ.26ರಂದು ತೆರೆ ಕಾಣುತ್ತಿದೆ. ಜಿಲ್ಲೆಯ ಕುಕನೂರು ಪಟ್ಟಣಕ್ಕೆ ಆಗಮಿಸಿದ ಟ್ಯಾಬ್ಲೋಗೆ ದರ್ಶನ್ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಬಳಿಕ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೈಕಾರ ಹಾಕಿದರು. ತಮ್ಮ ನೆಚ್ಚಿನ ನಟನ ಸಿನಿಮಾಗೆ ಶುಭ ಕೋರಿದರು. ಈ ವೇಳೆ ಕನ್ನಡಪರ ಸಂಘಟನೆ ಮುಖಂಡರು ಭಾಗಿಯಾಗಿದ್ದರು.
Last Updated : Feb 3, 2023, 8:36 PM IST