ಸಿಲಿಂಡರ್ ಸ್ಫೋಟಗೊಂಡು ಮನೆ ಛಾವಣಿ, ಕಿಟಕಿ ಛೀದ್ರ: ತಂದೆ, ಮಗಳಿಗೆ ಗಾಯ.. ವಿಡಿಯೋ - ಗ್ಯಾಸ್ ಸಿಲಿಂಡರ್ ಸ್ಫೋಟ
🎬 Watch Now: Feature Video
Published : Nov 3, 2023, 8:30 PM IST
ಆನೇಕಲ್: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ಛಾವಣಿ, ಕಿಟಕಿ ಛಿದ್ರಗೊಂಡ ಘಟನೆ ಇಂದು ಮುಂಜಾನೆ ಬನ್ನೇರುಘಟ್ಟದ ಸುದರ್ಶನ ನಗರದಲ್ಲಿ ನಡೆದಿದೆ. ಬೆಳಗ್ಗೆ 5.20ಕ್ಕೆ ಮನೆಯಲ್ಲಿದ್ದ ಅಡುಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ತಂದೆ ಹಾಗೂ ಮಗಳಿಗೆ ಗಾಯಗಳಾಗಿದ್ದು, ಅವರನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮನೆಯಲ್ಲಿದ್ದ ಅಳಿಯ ಬೇರೆಡೆ ಹೊರಟಿದ್ದ ಕಾರಣ, ಸ್ಫೋಟದ ಅಪಾಯದಿಂದ ಪಾರಾಗಿದ್ದಾನೆ.
ಬನ್ನೇರುಘಟ್ಟದ ಸುದರ್ಶನ ನಗರದಲ್ಲಿನ ಶಿವಕುಮಾರ್ ಎಂಬುವವರ ಬಾಡಿಗೆ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಆದರೆ, ಸಿಲಿಂಡರ್ ಸ್ಫೋಟಗೊಂಡ ಸ್ಥಿತಿಯಲ್ಲಿ ಕಾಣದೇ ಇದ್ದದ್ದು ಸುತ್ತಮುತ್ತಲ ಮನೆಯವರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸ್ಫೋಟದ ಶಬ್ಧ ಮತ್ತು ಅದರ ತೀವ್ರತೆಯಿಂದ ಇದು ಅಡುಗೆ ಸಿಲಿಂಡರ್ ಸ್ಫೋಟವಲ್ಲ ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಮನೆಯನ್ನು ಬಾಡಿಗೆಗೆ ನೀಡಿದ್ದ ಶಿವಶಂಕರ್ ಅವರು ಪಕ್ಕದ ಮೇಲಂತಿಸ್ತಿನ ಮನೆಯಲ್ಲಿ ವಾಸವಿದ್ದರು. ಸ್ಫೋಟದಿಂದಾಗಿ ಮನೆಯ ಕಿಟಕಿ, ಸಿಮೆಂಟ್ ಶೀಟ್ ಮೇಲ್ಛಾವಣಿ ಛಿದ್ರಗೊಂಡಿದೆ. ಒಂದು ಕಾರು ಒಂದು ಬೈಕ್ ಸ್ಫೋಟದ ತೀವ್ರತೆಗೆ ಅಡ್ಡ ಬಿದ್ದಿವೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ನೋಡಿ: ಮಥುರಾ.. ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಕ್ಲೋರಿನ್ ಅನಿಲ ಸೋರಿಕೆ : 10 ನರ್ಸಿಂಗ್ ವಿದ್ಯಾರ್ಥಿನಿಯರು ಅಸ್ವಸ್ಥ