ಭದ್ರಾ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ.. ಪ್ರಾಣಾಪಾಯಕ್ಕೂ ಮುನ್ನ ಸೆರೆಹಿಡಿಯಿರಿ ಅಂತಿರುವ ಜನ
🎬 Watch Now: Feature Video
ಚಿಕ್ಕಮಗಳೂರು: ಎನ್ ಆರ್ ಪುರ ತಾಲೂಕು ಬಾಳೆಹೊನ್ನೂರಿನ ಭದ್ರಾ ನದಿಯಲ್ಲಿ ಮೊಸಳೆ ಪತ್ತೆಯಾಗಿದ್ದು, ಜನರೆ ನಿದ್ದೆಗೆಡಿಸಿದೆ. ನದಿಗೆ ಕೋಳಿ ತ್ಯಾಜ್ಯ ಹಾಕುತ್ತಿರುವುದರಿಂದ ಮೊಸಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಮಹಿಳೆಯರು ಬಟ್ಟೆ ತೊಳೆಯುತ್ತಾರೆ, ಹಾಗೆ ರೈತರು ಹಸು, ಜಾನುವಾರುಗಳಿಗೆ ಸ್ನಾನ ಮಾಡಿಸಲು ಬರುತ್ತಾರೆ. ಈ ವೇಳೆ ಮೊಸಳೆ ದಾಳಿ ಮಾಡಿದರೆ ನಮ್ಮ ಕಥೆ ಏನು? ಈ ಹಿಂದೆಯೂ ಹಲವು ಬಾರಿ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಆಗಲೂ ಕೂಡ ನಾವು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದೆವು. ಆದ್ರೆ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಗ್ರಾ.ಪಂ ಅಧ್ಯಕ್ಷೆ ಜಾನಕಿ ಅವರ ಮಾತಾಗಿದೆ.
Last Updated : Feb 3, 2023, 8:37 PM IST