Viral Video : ಅರೆಬೆತ್ತಲೆಯಾಗಿ ಬೈಕ್‌ನಲ್ಲಿ ತೆರಳುತ್ತಾ ಮಳೆಯಲ್ಲಿ ಸ್ನಾನ ಮಾಡಿದ ಯುವಕರು - ವೈರಲ್ ವಿಡಿಯೋ
🎬 Watch Now: Feature Video
ಕಾನ್ಪುರ್ ( ಉತ್ತರ ಪ್ರದೇಶ) : ರಾಜ್ಯದಲ್ಲಿ ಬಿಸಿಲಿನ ತಾಪದಿಂದ ಕಂಗೆಟ್ಟ ಪ್ರತಿಯೊಬ್ಬರೂ ತಮ್ಮದೇ ಶೈಲಿಯಲ್ಲಿ ಮಳೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಕೆಲವೆಡೆ ಜನರು ಮಳೆಯಲ್ಲಿಯೇ ಓಡಾಡುತ್ತಿರುವುದು ಕಂಡುಬಂದರೆ, ಇನ್ನೂ ಕೆಲವರು ಮಳೆಯಲ್ಲಿ ಡ್ಯಾನ್ಸ್ ಮಾಡುವ ರೀಲ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು. ಆದರೆ, ಶುಕ್ರವಾರ ಮಳೆಯಲ್ಲೇ ಸ್ನಾನ ಮಾಡುವ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿ ಜನ ನಗು ಬೀರಿದ್ದಾರೆ.
ಅರೆಬೆತ್ತಲೆಯಾಗಿ ಮೈಮೇಲೆ ಸಾಬೂನು ಹಚ್ಚಿಕೊಂಡು ಇಬ್ಬರು ಯುವಕರು ಬೈಕ್‌ನಲ್ಲಿ ಸ್ನಾನಕ್ಕೆಂದು ರಸ್ತೆಯಲ್ಲಿ ತೆರಳಿದ್ದರು. ರಸ್ತೆಯಲ್ಲಿ ಸಾಗುತ್ತಿದ್ದ ಕೆಲ ವಾಹನ ಸವಾರರು ಈ ಇಬ್ಬರನ್ನು ವಿಡಿಯೋ ಮಾಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಳಿಕ, ಈ ವಿಡಿಯೋ ವೈರಲ್ ಆಗಿದ್ದು, ಸಂಚಾರಿ ಪೊಲೀಸರು ಇಬ್ಬರು ಬೈಕ್ ಸವಾರರಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
ವಿಡಿಯೋದಲ್ಲೇನಿದೆ?: ಇಬ್ಬರು ಹುಡುಗರು ಹೆಲ್ಮೆಟ್ ಧರಿಸದೆ ಮಳೆಯಲ್ಲೇ ಬೈಕ್ ಓಡಿಸುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಮೈಮೇಲೆ ಸೋಪಿನ ಕಲ್ಮಶವಿದ್ದು, ಮಳೆ ನಡುವೆ ಚಲಿಸುತ್ತಿದ್ದ ಬೈಕ್‌ನಲ್ಲಿ ಸ್ನಾನ ಮಾಡಿದ್ದಾರೆ. ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಮಂದಿ ಶೇರ್ ಮಾಡಿದ್ದಾರೆ. ಅಂದಹಾಗೆ, ಕೆಲ ಜನರು ಈ ವಿಡಿಯೋವನ್ನು ತುಂಬಾ ತಮಾಷೆಯಾಗಿ ಕಾಣುತ್ತಿದ್ದಾರೆ. ಇನ್ನೂ ಕೆಲ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಕ್‌ನ ನಂಬರ್ ಪ್ಲೇಟ್ ಯುಪಿ 78 ರಿಂದ ಪ್ರಾರಂಭವಾಗಿದ್ದು, ವೈರಲ್ ವಿಡಿಯೋ ಕಾನ್ಪುರದ್ದು ಎಂದು ಊಹಿಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಾಹನ ಸಂಖ್ಯೆಗೆ ಸಂಬಂಧಿಸಿದಂತೆ ಪ್ರಕರಣದ ತನಿಖೆಗೆ ಸಂಚಾರ ಡಿಸಿಪಿ ರವೀನಾ ತ್ಯಾಗಿ ಆದೇಶಿಸಿದ್ದಾರೆ.
ಇದನ್ನೂ ಓದಿ : ಮಹಿಳೆಯರಿಗೆ ಉಚಿತ ಪ್ರಯಾಣ: ಸೀಟ್ ಮೇಲೆ ಹತ್ತಿ ಟಿಕೆಟ್ ನೀಡಿದ ಕಂಡಕ್ಟರ್ ವಿಡಿಯೋ ವೈರಲ್