Bihar crime: ಮಾಜಿ ಡಿಸಿಎಂ ಕಾರ್ಯಕ್ರಮದಲ್ಲಿ ಹಣ ವಿಚಾರವಾಗಿ ಬಿಜೆಪಿ ಮುಖಂಡನಿಂದ ಗುಂಡಿನ ದಾಳಿ - ಬಿಜೆಪಿ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
🎬 Watch Now: Feature Video
ಮಾಧೇಪುರ (ಬಿಹಾರ): ಬಿಹಾರದ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ತಾರ್ ಕಿಶೋರ್ ಪ್ರಸಾದ್ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಗುಂಡಿನ ದಾಳಿ ನಡೆಸಿರುವ ಘಟನೆ ಮಾಧೇಪುರದಲ್ಲಿ ಭಾನುವಾರ ನಡೆದಿದೆ. ಈ ಘಟನೆಯಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದು, ಗುಂಡು ಹಾರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಪಂಕಜ್ ಕುಮಾರ್ ನಿರಾಲಾ ಎಂದು ಗುರುತಿಸಲಾಗಿದೆ. ಹಣದ ವಿಚಾರವಾಗಿ ಈ ಗುಂಡಿನ ದಾಳಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜಯ್ ಕುಮಾರ್ ಭಗತ್ ಎಂಬಾತನಿಗೆ ಆರೋಪಿ ಪಂಕಜ್ ಕುಮಾರ್ ನಿರಾಲಾ ಹಣ ನೀಡಬೇಕಾಗಿತ್ತು. ನಿರಾಲಾ ಬಳಿ ಭಗತ್ ತನ್ನ ಹಣ ಕೇಳಿದಾಗ ಇಬ್ಬರ ನಡುವೆ ಮಾರಾಮಾರಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಲ್ಲದೇ, ಈ ಮಾರಾಮಾರಿಯಲ್ಲಿ ನಿರಾಲಾ ತನ್ನ ಬಳಿಯಿಂದ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಪರಿಣಾಮ ಒಂದು ಗುಂಡು ಭಗತ್‌ನ ಸೊಂಟಕ್ಕೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಆರೋಪಿ ಪಂಕಜ್ ಕುಮಾರ್ ನಿರಾಲಾನನ್ನು ಬಂಧಿಸಲಾಗಿದೆ. ಪಿಸ್ತೂಲಿನ ಪರವಾನಗಿ ರದ್ದುಪಡಿಸಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ. ಗುಂಡು ಹಾರಿಸಿದ ಆರೋಪಿ ಹಾಗೂ ಇದರಿಂದ ಗಾಯಗೊಂಡಿರುವ ಇಬ್ಬರು ಕೂಡ ಬಿಜೆಪಿ ಮುಖಂಡರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆಸ್ತಿ ವಿಚಾರವಾಗಿ ಕೌಟುಂಬಿಕ ಕಲಹ: ಪತ್ನಿಯ ಬೆನ್ನತ್ತಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಪತಿ!