ಜಿ20 ಶೃಂಗಸಭೆ: ಟೀಕೆಗೆ ಗುರಿಯಾದ ನೃತ್ಯ... ಏನಿದು ವಿವಾದ? - etv bharat karnataka
🎬 Watch Now: Feature Video


Published : Sep 8, 2023, 10:15 PM IST
ಗುವಾಹಟಿ( ಅಸ್ಸೋಂ): ಜಿ20 ಶೃಂಗಸಭೆ ಹಿನ್ನೆಲೆ ರಾಜಧಾನಿ ನವದೆಹಲಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ, ಶೃಂಗಸಭೆಯಲ್ಲಿ ಭಾಗವಹಿಸಲು ವಿವಿಧ ರಾಷ್ಟ್ರಗಳ ನಾಯಕರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಅಸ್ಸೋಂನ ಸಾಂಪ್ರದಾಯಿಕ ನೃತ್ಯ ಬಿಹು ಪ್ರದರ್ಶನದ ಕುರಿತು ವಿವಾದಾಕ್ಕೊಳಗಾಗಿದೆ. ಜಿ20 ಶೃಂಗಸಭೆಗಾಗಿ ದೆಹಲಿಗೆ ಬಂದಿಳಿದ ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಸ್ವಾಗತ ಕೋರಲು ವಿಮಾನ ನಿಲ್ದಾಣದ ಅಸ್ಸೋಂನ ಸಾಂಸ್ಕೃತಿಕ ಕಲಾ ಪ್ರಕಾರವಾದ ಬಿಹು ನೃತ್ಯ ಪ್ರದರ್ಶಿಸಲಾಗಿತ್ತು. ಆದರೆ, ಇದು ಪ್ರೇಕ್ಷಕರು ಮತ್ತು ಅಂತಾರಾಷ್ಟ್ರೀಯ ಗಣ್ಯರಿಗೆ ವಿಚಿತ್ರವಾಗಿದೆ ಕಂಡಿದೆ. ಏಕೆಂದರೆ ಇದು ನಿಜವಾದ ಬಿಹು ನೃತ್ಯದ ಪ್ರಕರವಲ್ಲ ಎಂದು ಟೀಕಿಗಳಿಗೆ ಗುರಿಯಾಗಿದೆ
ಕೆಲವು ತಿಂಗಳ ಹಿಂದೆ, ಅಸ್ಸೋಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ, ಗುವಾಹಟಿಯ ಸರುಸಜಾಯ್ ಕ್ರೀಡಾಂಗಣದಲ್ಲಿ ಸುಮಾರು 11,000 ನೃತ್ಯಗಾರರು ಬಿಹು ನೃತ್ಯವನ್ನು ಪ್ರದರ್ಶಿಸುವ ದಾಖಲೆ ನಿರ್ಮಿಸಿದ್ದರು. ಇದು ಆ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ನೃತ್ಯವಾಗಿದೆ. ಆದರೆ, ನವದೆಹಲಿ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ವಿದೇಶಿ ಗಣ್ಯರ ಮುಂದೆ ಬಿಹು ನೃತ್ಯವನ್ನು ವಿಕೃತ ರೀತಿಯಲ್ಲಿ ಪ್ರದರ್ಶಿಸಲಾಗಿದೆ ಎಂಬ ಟೀಕೆ ವ್ಯಕ್ತವಾಗುತ್ತಿದೆ. ಜಿ20 ಶೃಂಗಸಭೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಸ್ಸೋಂನ ಸಂಸ್ಕೃತಿಯನ್ನು ಸರಿಯಾಗಿ ಪ್ರಸ್ತುತಪಡಿಸಲು ವಿಫಲವಾಗಿದೆ ಎಂದು ಜನರು ಟೀಕಿಸುತ್ತಿದ್ದಾರೆ.
ಇದನ್ನೂ ಓದಿ: G20 ಶೃಂಗಸಭೆ: ಭಾರತದ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಶ್ಲಾಘಿಸಿದ ವಿಶ್ವಬ್ಯಾಂಕ್