ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್​​​ ಆಶ್ವಾಸನೆ.. ಬಿಜೆಪಿಯಿಂದ ತೀವ್ರ ಆಕ್ರೋಶ, ಪರ - ವಿರೋಧದ ಚರ್ಚೆ - ಬಜರಂಗದಳ ಬ್ಯಾನ್​​​ ಆಶ್ವಾಸನೆ

🎬 Watch Now: Feature Video

thumbnail

By

Published : May 5, 2023, 8:02 PM IST

Updated : May 6, 2023, 11:51 AM IST

ಚುನಾವಣೆ ಹೊತ್ತಲ್ಲಿ ಆಡಳಿತಾರೂಢ ಬಿಜೆಪಿಗೆ ಹೊಸ ಅಸ್ತ್ರವೊಂದು ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟವಾದ ವಿವಾದಾತ್ಮಕ ವಿಚಾರ ಬಿಜೆಪಿಗೆ ಬಲ ನೀಡಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಜರಂಗದಳ ನಿಷೇಧದ ಆಶ್ವಾಸನೆ ಕಾಂಗ್ರೆಸ್ ಪಕ್ಷಕ್ಕೆ ಕಟ್ಟಾ ಹಿಂದೂಗಳ ಮತ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಆದರೆ ಎಚ್ಚೆತ್ತುಕೊಂಡ ಕಾಂಗ್ರೆಸ್​​ ಎಲ್ಲೆಡೆ ಹನುಮಾನ್​ ಮಂದಿರ ಪುನರುಜ್ಜೀವನ ಮಾಡುವ ಘೋಷಣೆ ಮಾಡಿ, ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾಗಿದೆ.

ಕಾಂಗ್ರೆಸ್​ ತನ್ನ ಪ್ರಣಾಳಿಕೆಯನ್ನು ಕಳೆದ ಎರಡ್ಮೂರು ದಿನಗಳ ಹಿಂದೆ ಬಿಡುಗಡೆ ಮಾಡಿತ್ತು. ಪ್ರಣಾಳಿಕೆಯಲ್ಲಿ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಬಜರಂಗದಳ ಸಂಘಟನೆಯನ್ನು ನಿಷೇಧ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿತ್ತು. ಈ ವಿಚಾರವನ್ನೇ ಬಿಜೆಪಿ ಪ್ರಬಲ ಅಸ್ತ್ರವಾಗಿ ಬಳಕೆ ಮಾಡಿಕೊಂಡಿದೆ. ನಿನ್ನೆ ಸಂಜೆ ಎಲ್ಲ ಹನುಮಾನ್​ ದೇವಾಲಯಗಳಲ್ಲಿ ಹನುಮಾನ್​ ಚಾಲಿಸ್​ ಓದುವ ಮೂಲಕ ಭರ್ಜರಿಯಾಗೇ ಟಾಂಗ್​ ಕೊಟ್ಟಿದೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷ ಡ್ಯಾಮೇಜ್ ಕಂಟ್ರೋಲ್​ಗೆ ಹರಸಾಹಸ ಪಡುತ್ತಿದೆ.

ಬಜರಂಗದಳ ನಿಷೇಧ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಸಂಗತಿಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಆಂತರಿಕವಾಗಿ ಪಕ್ಷದ ಹಲವಾರು ಮುಖಂಡರು ಹಾಗೂ ಅಭ್ಯರ್ಥಿಗಳು ತಮ್ಮ ಗೆಲುವಿಗೆ ಎಲ್ಲಿ ತೊಡಕಾಗಲಿದೆಯೋ ಎನ್ನುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಣಾಳಿಕೆಯಲ್ಲಿನ ಬಜಂಗದಳ ನಿಷೇಧದ ಪ್ರಸ್ತಾವನೆಯನ್ನು ಸಮರ್ಥಿಸಿಕೊಳ್ಳುತ್ತಾ ತಾವು ಸಹ ಆಂಜನೇಯನ ಪರಮ ಭಕ್ತರು, ಹಿಂದೂಗಳು ಎನ್ನುತ್ತಾ ಹಿಂದೂಗಳ ಮತ ಸೆಳೆಯುವಲ್ಲಿ ಕಾರ್ಯನಿರ್ತರಾಗಿದ್ದಾರೆ. ಒಟ್ಟಿನಲ್ಲಿ  ಬಜರಂಗದಳ ನಿಷೇಧದ ವಿವಾದವು ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪರಸ್ಪರ ವಾಕ್ಸಮರಕ್ಕೆ ಕಾರಣವಾಗಿದ್ದು, ಚುನಾವಣಾ ಪ್ರಚಾರದ ದಿಕ್ಕನ್ನೇ ಬದಲಿಸಿದೆ.

ಇದನ್ನೂ ಓದಿ: ಐತಿಹಾಸಿಕ ಪ್ರಸಿದ್ಧ ಬಸವನಗುಡಿ ಕ್ಷೇತ್ರದಲ್ಲಿ ಈ ಬಾರಿ ಕೈ- ತೆನೆ-ಕಮಲ ಪೈಪೋಟಿ ಪಕ್ಕಾ!.. ಹೀಗಿದೆ ನೋಡಿ ಕ್ಷೇತ್ರ ವಿವರ

Last Updated : May 6, 2023, 11:51 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.