ಮತದಾರರ ಓಲೈಸಲು ಹಣ ಹಂಚುತ್ತಿರುವ ಕಾಂಗ್ರೆಸ್ ಅಭ್ಯರ್ಥಿ: ವಿಡಿಯೋ ವೈರಲ್ - ಕಾಂಗ್ರೆಸ್ ಅಭ್ಯರ್ಥಿ ವೈರಲ್ ವಿಡಿಯೋ
🎬 Watch Now: Feature Video
ವಡೋದರಾ(ಗುಜರಾತ್): ಗುಜರಾತ್ ವಿಧಾನಸಭೆ ಚುನಾವಣೆ 2022ಕ್ಕೆ ಮತ ಪ್ರಚಾರ ಬಿರುಸುಗೊಂಡಿದೆ. ದಭೋಯ್‌ನ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಪಟೇಲ್ ಮತದಾರರನ್ನು ಓಲೈಸಲು ಹಣ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿಜೆಪಿಯ ಮಾಧ್ಯಮ ವಿಭಾಗದ ಸಹ ಮುಖ್ಯಸ್ಥರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಮೆರವಣಿಗೆಯ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗಲು ಬಂದ ಜನರಿಗೆ ಕೈ ಅಭ್ಯರ್ಥಿ ಜೇಬಿನಿಂದ ಹಣ ನೀಡುತ್ತಿರುವುದು ಕಂಡುಬಂದಿದೆ.
Last Updated : Feb 3, 2023, 8:33 PM IST