ಮತದಾನ ಅಂತ್ಯವಾದ ಬೆನ್ನಲ್ಲೇ ನಗುನಗುತ್ತಲೇ ಮುಖಾಮುಖಿಯಾದ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
ಬೆಳಗಾವಿ : ಮತದಾನ ಅಂತ್ಯವಾದ ಬೆನ್ನಲ್ಲೇ ಮುಖಾಮುಖಿಯಾದ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪರಸ್ಪರ ನಗುನಗುತ್ತಲೇ ಮಾತನಾಡಿದ ಅಪರೂಪದ ಘಟನೆಯೊಂದು ನಗರದಲ್ಲಿ ನಡೆಯಿತು. ಶಿವಾಜಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.27ರ ಮತಗಟ್ಟೆಯಲ್ಲಿ ಸಂಜೆ ಆರು ಗಂಟೆ ಬಳಿಕವೂ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರಿಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಮೊದಲಿಗೆ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಆಗಮಿಸಿದರು. ನಂತರ ಕಾಂಗ್ರೆಸ್ ಅಭ್ಯರ್ಥಿ ಆಸೀಫ್ ಸೇಠ್ ಬಂದರು. ಹೀಗಾಗಿ ಇಬ್ಬರೂ ಮುಖಮುಖಿಯಾದರು.
ಈ ವೇಳೆ ಇಬ್ಬರು ಸಹಾ ನಗು ನಗುತ್ತಲೇ ಹಸ್ತಲಾಘವ ಮಾಡಿ, ಪರಸ್ಪರ ಕುಶಲೋಪರಿ ವಿಚಾರಿಸಿದರು. ಬಳಿಕ ಇಬ್ಬರೂ ನಾಯಕರು ತಮ್ಮ ಪಕ್ಷ ಭೇದ ಮರೆತು ಒಟ್ಟಾಗಿ ನಿಂತು ಫೋಟೋಗೆ ಪೋಸ್ ಕೊಟ್ಟರು.
ಮತ್ತೊಂದೆಡೆ ಹುಕ್ಕೇರಿ ಕ್ಷೇತ್ರ ಮದಮಕ್ಕನಾಳ ಗ್ರಾಮದ ಮತಗಟ್ಟೆ ಸಂಖ್ಯೆ 193ರಲ್ಲಿ ಸಂಜೆ 6 ಗಂಟೆಯಾದರೂ ಮತದಾನ ಮಾಡದ 150 ಕ್ಕೂ ಅಧಿಕ ಮತದಾರರು ಉಳಿದಿದ್ದರು. ಕಾರಣವೆನೆಂದರೆ ಮಧ್ಯಾಹ್ನದ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿದ ಮತದಾರರು ಬ್ಯಾಲೆಟ್ ಯೂನಿಟ್ನಲ್ಲಿ ತಾಂತ್ರಿಕ ದೋಷದಿಂದ ಒಂದು ಗಂಟೆ ಕಾಲ ಮತದಾನ ಸ್ಥಗಿತವಾಗಿ ಕಾಯುವಂತೆ ಆಗಿತ್ತು. ಬಳಿಕ ತಾಂತ್ರಿಕ ದೋಷ ನಿವಾರಣೆ ಮಾಡಿ ಮತದಾನ ಪುನಾರಂಭಗೊಂಡಿತ್ತು.
ಇದನ್ನೂ ಓದಿ : ಮತ ಚಲಾಯಿಸಿದ ರಾಕಿಭಾಯ್: ಸಿನಿಮಾ, ರಾಜಕೀಯ, ಪ್ರಚಾರದ ಬಗ್ಗೆ ಯಶ್ ಮನದಾಳದ ಮಾತು