ಅನ್ನಭಾಗ್ಯ ಯೋಜನೆಗೆ ಅಕ್ಕಿ ನಿರಾಕರಣೆ ಖಂಡಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
🎬 Watch Now: Feature Video
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಎಫ್‌ಸಿಐ ಅಕ್ಕಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ವಿನೂತನವಾಗಿ ಇಂದು ಪ್ರತಿಭಟನೆ ನಡೆಸಿದರು. ರೇಸ್ ಕೋರ್ಸ್ ರಸ್ತೆಯಲ್ಲಿ ಸೇರಿದ ಕಾರ್ಯಕರ್ತರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಹಿಳಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಮುಂದೆ ಸಾಗಿದ ಚಾಲಕ.. ನಮ್ಮ ಮೇಲೆ ಬಸ್ ಹರಿಸುವ ಯತ್ನ ಎಂದು ಮಹಿಳೆಯರ ಆಕ್ರೋಶ!
ಪ್ರಧಾನಿ ಮೋದಿ ಅನ್ನ ಬೇಯಿಸುತ್ತಿರುವಂತೆ ಅಣಕು ಪ್ರದರ್ಶನ ಮಾಡಿದರು. ಇದೇ ವೇಳೆ ಮೋದಿ ಭಕ್ತರು ಅನ್ನ ಬೇಯಿಸುತ್ತಿರುವಂತೆ ಪ್ರದರ್ಶಿಸಿದರು. ಪ್ರಧಾನಿಗೆ ಧಿಕ್ಕಾರ ಕೂಗಿದರು.
ಇದನ್ನೂ ಓದಿ: ಸರ್ಕಾರಿ ಬಸ್ಗಳೆಲ್ಲ ರಶ್ ರಶ್.. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ: ವಿಡಿಯೋ
ಮಂಗಳವಾರ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ. ಜಿಲ್ಲಾ ಕೇಂದ್ರಗಳಲ್ಲಿ ಕೈ ಕಾರ್ಯಕರ್ತರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಕಾಂಗ್ರೆಸ್ ಪಕ್ಷವೂ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಜನರಿಗೆ ಪ್ರಮುಖವಾಗಿ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಈ ಪೈಕಿ ಬಿಪಿಎಲ್ ವರ್ಗದವರಿಗೆ 10 ಕೆಜಿ ಅಕ್ಕಿ ವಿತರಣೆಯೂ ಮಹತ್ವದ್ದಾಗಿದೆ. ಇದನ್ನು ಜಾರಿಗೊಳಿಸಲು ಭಾರತೀಯ ಆಹಾರ ನಿಗಮಕ್ಕೆ ಅಕ್ಕಿ ನೀಡಲು ಮನವಿ ಮಾಡಿತ್ತು.
ಇದನ್ನೂ ಓದಿ: 'ಅನ್ನಭಾಗ್ಯ ಯೋಜನೆ'ಯಡಿ ಅಕ್ಕಿ ನೀಡಲು ನಿರಾಕರಣೆ.. ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್ ಪ್ರತಿಭಟನೆ: DCM