ಬೀದರ್​ನಲ್ಲಿ ಸೀಟಿಗಾಗಿ ಮಹಿಳೆಯರ ಕಿತ್ತಾಟ- ಹುಬ್ಬಳ್ಳಿಯಲ್ಲಿ ವೃದ್ಧೆಗೆ ಕಪಾಳಮೋಕ್ಷ: ವಿಡಿಯೋ ಜಾಲತಾಣದಲ್ಲಿ ವೈರಲ್​ - ಸೀಟಿಗಾಗಿ ಬಸ್​ನಲ್ಲೇ ಕಿತ್ತಾಡಿಕೊಂಡ ಮಹಿಳೆಯರು

🎬 Watch Now: Feature Video

thumbnail

By

Published : Jun 23, 2023, 4:33 PM IST

Updated : Jun 23, 2023, 7:09 PM IST

ಹುಬ್ಬಳ್ಳಿ/ಬೀದರ್​: ರಾಜ್ಯ ಸರ್ಕಾರ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುಮತಿ ನೀಡುತ್ತಿದಂತೆ ಒಂದಿಲ್ಲೊಂದು ಅವಾಂತರಗಳು ಸೃಷ್ಟಿಯಾಗುತ್ತಿವೆ.‌ ಕೆಲ ದಿನಗಳ ಹಿಂದೆ ಬಸ್​ನಲ್ಲಿ ಸೀಟ್​ಗಾಗಿ ಮಹಿಳೆಯರು ಕಿತ್ತಾಡಿಕೊಂಡಿದ್ದ ಘಟನೆ ಬಾರಿ ಸುದ್ದಿಯಾಗಿತ್ತು. ಇದೀಗ ಅಂತಹುದ್ದೇ ಘಟನೆ ಕುಂದಗೋಳ ಹುಬ್ಬಳ್ಳಿ ಬಸ್​ನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕಿ ಹಾಗೂ ವೃದ್ಧೆಯ ನಡುವೆ ಗಲಾಟೆ ನಡೆದಿದ್ದು, ಇಬ್ಬರು ಅವಾಚ್ಯ ಶಬ್ದಗಳಿಂದ ಬೈಯ್ದಾಡಿಕೊಂಡಿದ್ದಾರೆ. ಕೋಪಗೊಂಡ ನಿರ್ವಾಹಕಿ ಬಸ್​ನಲ್ಲೇ ವೃದ್ಧೆಗೆ ಕಪಾಳಮೋಕ್ಷ ಮಾಡಿದ್ದಾರೆ. 

ಕುಂದಗೋಳದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್​ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಕುಂದಗೋಳದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಮಾರ್ಗ ಮಧ್ಯೆ ಶೆರೆವಾಡ ಗ್ರಾಮದ ಬಳಿ ನಿರ್ವಾಹಕಿ ಹಾಗೂ ವೃದ್ಧ ಮಹಿಳೆ ನಡುವೆ ಟಿಕೆಟ್ ಹಾಗೂ ಸೀಟು ಸಲುವಾಗಿ ಜಗಳ ಆರಂಭವಾಗಿದೆ. ಈ ಜಗಳ ಅತಿರೇಕಕ್ಕೆ ಹೋಗಿದ್ದು ವೃದ್ಧ ನಿರ್ವಾಹಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ನಿರ್ವಾಹಕಿ ವೃದ್ಧೆಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸಹ ಪ್ರಯಾಣಿಕರು ಮೊಬೈಲ್​​ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.‌ ನಿರ್ವಾಹಕಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ.

ಸೀಟಿಗಾಗಿ ಬಸ್​ನಲ್ಲೇ ಕಿತ್ತಾಡಿಕೊಂಡ ಮಹಿಳೆಯರು: ಭಾಲ್ಕಿಯಿಂದ ಹಳ್ಳಿಖೇಡ್​ಗೆ ಹೋರಟಿದ್ದ ಬಸ್​ನಲ್ಲಿ ಮಹಿಳೆಯರು ಕಿತ್ತಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ್ ಗ್ರಾಮದ ಬಳಿ ನಡೆದಿದೆ. ಒಬ್ಬ ಮಹಿಳೆ ತನಗೂ ಈ ಸೀಟಿನಲ್ಲಿ ಜಾಗ ಬಿಡು ಎಂದಿದ್ದಾಳೆ. ಆಗ ಸೀಟಿನಲ್ಲಿ ಕುಳಿತ ಮಹಿಳೆ ಆಗಲ್ಲಾ ಎಂದಿದ್ದು, ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದೆ. ಮಾತು ತಾರಕಕ್ಕೇರಿ ಕೈ ಕೈ ಮಿಲಾಸಿಕೊಂಡಿದ್ದಾರೆ. ನಂತರ ಬಸ್​ನಲ್ಲಿದ್ದ ಇತರ ಪ್ರಯಾಣಿಕರು ಪರಸ್ಪರ ಬೈದಾಡುತ್ತಾ ಕಿತ್ತಾಡುತ್ತಿದ್ದ ಮಹಿಳೆಯರನ್ನು ಸುಮ್ಮನಾಗಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಸರ್ಕಾರಿ ಬಸ್​ನಲ್ಲಿ ಸೀಟ್​ಗಾಗಿ ನಾರಿಯರ ಕಿತ್ತಾಟ: ವೈರಲ್ ವಿಡಿಯೋ

Last Updated : Jun 23, 2023, 7:09 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.