ಬೆಡ್‌ರೂಂನಲ್ಲಿ ಮಲಗಿದ್ದ ಬುಸ್ ಬುಸ್ ನಾಗಪ್ಪ; ಹಾವು ಕಂಡು ಎದ್ನೋ ಬಿದ್ನೋ ಅಂತಾ ಓಡಿದ ವ್ಯಕ್ತಿ!

🎬 Watch Now: Feature Video

thumbnail

By ETV Bharat Karnataka Team

Published : Nov 25, 2023, 7:50 PM IST

ಫತೇಹಾಬಾದ್( ಹರಿಯಾಣ): ಮನೆಯೊಂದಕ್ಕೆ ಹೊಕ್ಕ ನಾಗರಹಾವು, ವ್ಯಕ್ತಿಯೊಬ್ಬನ ಬೆಡ್‌ರೂಮ್ ಹಾಸಿಗೆಯಲ್ಲೇ ಮಲಗಿದ್ದ ಘಟನೆ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಬಟ್ಟು ಕಾಲಾ ಎಂಬ ಗ್ರಾಮವೊಂದರಲ್ಲಿ ನಡೆದಿದೆ. ಬೆಳಗ್ಗೆ ಎದ್ದ ತಕ್ಷಣ ಬೆಡ್‌ರೂಮ್​ನಲ್ಲಿರುವ ನಾಗರಹಾವು ಕಂಡ ದೂನಿ ರಾಮ್ ಸುತಾರ್​ ಎಂಬ ಯುವಕ ಎದ್ನೋ ಬಿದ್ನೋ ಅಂತಾ ಮನೆಯಿಂದ ಹೊರ ಓಡಿ ಬಂದಿದ್ದಾನೆ. ಬಳಿಕ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞರು ಹಾವನ್ನು ರಕ್ಷಿಸಿದ್ದಾರೆ.

ತಾನು ರಾತ್ರಿ ಮಲಗಿದ್ದಾಗ ಎಲ್ಲಿಂದಲೋ ಈ ಹಾವು ಬಂದಿದೆ. ಅಲ್ಲದೇ ಹಾಸಿಗೆಯ ಮೇಲಿದ್ದ ಹೊದಿಕೆಯ ಕೆಳಗೆ ಹೊಕ್ಕಿದೆ. ಆಗಾಗ ಬುಸ್​ ಎಂಬ ಸದ್ದು ಕೇಳಿಸುತ್ತಿತ್ತು. ಬೆಕ್ಕು ಇರಬಹುದೆಂದು ಭಾವಿಸಿದ್ದೆ. ಅಲ್ಲದೇ ನಿದ್ದೆ ಬಂದಿದ್ದರಿಂದ ಹೆಚ್ಚು ಗಮನ ಹರಿಸಲಿಲ್ಲ. ಆದರೆ, ಬೆಳಗ್ಗೆ ಎದ್ದು ನೋಡಿದಾಗ ನಾಗರಹಾವು ನನ್ನ ಪಕ್ಕದಲ್ಲಿಯೇ ಮಲಗಿತ್ತು. ತಕ್ಷಣ ಕೂಗಾಡಿಕೊಂಡು ಮನೆಯವರಿಗೆ ತಿಳಿಸಿದೆ. ಇದಾದ ನಂತರ ಎಲ್ಲರೂ ಹಾವು ಹಿಡಿಯುವವರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದು ನೋಡಿದಾಗ ಹಾವು ಹಾಸಿಗೆಯಲ್ಲಿಯೇ ಇತ್ತು. ಪವನ್ ಎನ್ನುವವರು ಹಾವು ಹಿಡಿದು ಕಾಡಿಗೆ ಹೋಗಿ ಬಿಟ್ಟಿದ್ದಾರೆ ಎಂದು ದೂನಿ ರಾಮ್ ಸುತಾರ್ ತನಗಾದ ಆತಂಕವನ್ನು ಹೇಳಿಕೊಂಡಿದ್ದಾರೆ. 

ಹಾವು ಅಡಗಿಕೊಳ್ಳಲು ಸ್ಥಳ ಹುಡುಕುತ್ತಿತ್ತು. ಹಾಗಾಗಿ ಹೊದಿಕೆಯ ಕೆಳಗೆ ಹೊಕ್ಕಿದೆ. ದೂನಿ ರಾಮ್‌ಗೆ ಕಚ್ಚಲಿಲ್ಲ ಎಂಬುದು ಅದೃಷ್ಟ. ರಾತ್ರಿಯಿಡೀ ನಾಗರವು ಹಾಸಿಗೆಯ ಮೇಲೆ ಮಲಗಿದ್ದು, ಅದೃಷ್ಟವಶಾತ್ ಕಚ್ಚದೇ ಇರುವುದನ್ನು ದೂನಿ ರಾಮ್ ಅವರ ಅದೃಷ್ಟ ಎನ್ನಬಹುದು ಎನ್ನುತ್ತಾರೆ ಉರಗ ತಜ್ಞ ಪವನ್.

ಇದನ್ನೂ ಓದಿ: ರಾಯಚೂರು : ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.