ನೀರಿನಿಂದ ತೆಗೆದ ಮೀನಿನಂತೆ ಬಿಜೆಪಿ ಜೆಡಿಎಸ್‌ನವರು ಒದ್ದಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ ಲೇವಡಿ - ಸಮನ್ವಯ ಕೊರತೆ

🎬 Watch Now: Feature Video

thumbnail

By ETV Bharat Karnataka Team

Published : Dec 11, 2023, 3:57 PM IST

ಬೆಳಗಾವಿ : ಸದನದಲ್ಲಿ ಉತ್ತರಕರ್ನಾಟಕದ ಯಾವುದೇ ಸಮಸ್ಯೆ ಪ್ರಸ್ತಾಪಿಸಿದರೂ ಉತ್ತರ ಕೊಡೋಕೆ ಸರ್ಕಾರ ತಯಾರಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವು ಯಾವುದಕ್ಕೂ ವಿಳಂಬ ಮಾಡೋದಾಗಲಿ, ಕಾಲಹರಣ ಮಾಡಲ್ಲ. ಇವತ್ತು ಬರಗಾಲದ ಬಗ್ಗೆ ಚರ್ಚೆಯಾಗುತ್ತಿದ್ದು, ಉತ್ತರ ಕೊಡುತ್ತೇವೆ. ನಾಳೆಯಿಂದ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ವಿಷಯ ನಿಗದಿಪಡಿಸಲಾಗಿದೆ‌ ಎಂದರು.

ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಧಿವೇಶನ ಮುಗಿದ ಬಳಿಕ ಬೆಂಗಳೂರಲ್ಲಿ ಕರೆದು ಮಾತನಾಡೋದಾಗಿ ಅವರ ನಾಯಕರಿಗೆ ಹೇಳಿದ್ದೇನೆ. ಬೆಳಗಾವಿಯಲ್ಲಿ ಸಮಯ ಇರೋದಿಲ್ಲ. ನಾನು ಪಂಚಮಸಾಲಿ ನಾಯಕರು, ಸ್ವಾಮೀಜಿ ಜೊತೆ ಮಾತನಾಡಿದ್ದೇನೆ ಎಂದರು.

ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಸ್ಪೀಕರ್‌ಗೆ ಸಂಬಂಧಿಸಿದ್ದು ಎಂದ ಸಿಎಂ, ಮೇ ಬಳಿಕ ಸರ್ಕಾರ ಪತನ ಎಂಬ ಹೆಚ್‌ಡಿಕೆ ಹೇಳಿಕೆಗೆ, ಬಿಜೆಪಿ ಜೆಡಿಎಸ್‌ನವರು ಪಾಪ ವಿಲಿವಿಲಿ ಅಂತಾ ಒದ್ದಾಡುತ್ತಿದ್ದಾರೆ. ನೀರಿನಿಂದ ತೆಗೆದ ಮೀನಿನ ರೀತಿ ಒದ್ದಾಡುತ್ತಿದ್ದು, ಭ್ರಮಾ ಲೋಕದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ನಾಯಕರ ಸಮನ್ವಯ ಕೊರತೆಯಿಂದ ಕಲಾಪದ ಸಮಯ ವ್ಯರ್ಥ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿಯವರಿಗೆ ಯಾವತ್ತೂ ಸಮನ್ವಯತೆ ಇಲ್ಲ. ಅವರು ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದವರು. ಬಳಿಕ ಸೋತಿದ್ದಾರೆ. ಜನ ತಿರಸ್ಕರಿಸಿದ್ದಾರೆ. ಇದಾದ ಮೇಲೆ ಸಮನ್ವಯ ಬರೋಕೆ ಸಾಧ್ಯವೇ ಇಲ್ಲ. ಅಲ್ಲಿ ಎರಡು ಗುಂಪು, ಮೂರು ಗುಂಪುಗಳು ಇವೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: ಸದನದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಪ್ರಸ್ತಾಪ ಬಂದರೆ ಚರ್ಚಿಸುತ್ತೇವೆ: ಡಿಸಿಎಂ ಡಿಕೆಶಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.