ಅಪಘಾತದಲ್ಲಿ ಗಾಯಗೊಂಡ ರಿಷಭ್ ಪಂತ್ ರಕ್ಷಿಸಿದ್ದ ನಾಲ್ವರಿಗೆ ಸಿಎಂ ಸನ್ಮಾನ - ಈಟಿವಿ ಭಾರತ ಕನ್ನಡ
🎬 Watch Now: Feature Video
ಡೆಹ್ರಡೂನ್ (ಉತ್ತರಾಖಂಡ): ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತ ತಂಡದ ಬ್ಯಾಟರ್ ರಿಷಭ್ ಪಂತ್ ಅವರನ್ನು ರಕ್ಷಿಸಿದ್ದ ಚಾಲಕ ಸುಶೀಲ್ ಕುಮಾರ್, ಕಂಡಕ್ಟರ್ ಪರಮ್‌ಜೀತ್, ನಿಶು ಮತ್ತು ರಜತ್ ಎಂಬುವವರಿಗೆ ಇಂದು ಸನ್ಮಾನಿಸಲಾಯಿತು. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಈ ನಾಲ್ವರಿಗೆ ಸನ್ಮಾನಿಸಿದರು. ಅಲ್ಲದೇ ತಲಾ ಒಬ್ಬರಿಗೆ ಒಂದು ಲಕ್ಷ ರೂ ನಗದು ಸೇರಿ ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಸುಶೀಲ್ ಕುಮಾರ್ ಅವರ ಪತ್ನಿ ರಿತು, ಪರಮ್‌ಜೀತ್ ಅವರ ತಂದೆ ಸುರೇಶ್ ಕುಮಾರ್ ಗೌರವವನ್ನು ಸ್ವೀಕರಿಸಿದರು. ಇನ್ನು ಕಳೆದ ವರ್ಷ ಡಿ.30ರಂದು ದೆಹಲಿಯಿಂದ ಮನೆಗೆ ವಾಪಸ್ಸಾಗುವಾಗ ಹಮ್ಮದ್‌ಪುರ ಝಾಲ್ ಬಳಿ ರಿಷಭ್ ಪಂತ್ ಅವರ ಕಾರು ಡಿವೈಡರ್ಗೆ ಡಿಕ್ಕಿಹೊಡೆದಿತ್ತು.
ಘಟನೆಯಲ್ಲಿ ರಿಷಭ್ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಸುಶೀಲ್ ಕುಮಾರ್, ಪರಮ್‌ಜೀತ್, ನಿಶು ಮತ್ತು ರಜತ್ ಎಂಬುವವರು ಅವರ ಸಾಹಾಯಕ್ಕೆ ದೌಡಾಯಿಸಿ ಅವರನ್ನು ರಕ್ಷಣೆ ಮಾಡಿದ್ದರು. ಅಲ್ಲದೇ ರಿಷಭ್ ಪಂತ ಅವರಿಗೆ ಸಂಬಧಿಸಿದ ವಸ್ತುಗಳನ್ನು ಪೊಲೀಸರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದರು. ಈ ಬಗ್ಗೆ ಪಂತ್ ಕೂಡ ಅವರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: Watch.. ಶ್ರೀನಗರದ ಲಾಲ್ಚೌಕ್ ಕ್ಲಾಕ್ ಟವರ್ ಮೇಲೆ ಹಾರಾಡಿದ ತ್ರಿವರ್ಣ ಧ್ವಜ