ಮಲೆನಾಡಲ್ಲಿ ಸಂಭ್ರಮದ ಕ್ರಿಸ್​ಮಸ್: ವಿಡಿಯೋ ನೋಡಿ - ಶಿವಮೊಗ್ಗ ಕ್ರಿಸ್​ಮಸ್

🎬 Watch Now: Feature Video

thumbnail

By ETV Bharat Karnataka Team

Published : Dec 25, 2023, 12:13 PM IST

ಶಿವಮೊಗ್ಗ: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸು ಕ್ರಿಸ್ತನ ಜನ್ಮ ದಿನವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಸಂಭ್ರಮ - ಸಡಗರದಿಂದ ಕ್ರೈಸ್ತ ಭಾಂದವರು ಆಚರಿಸಿದರು. ಜಿಲ್ಲೆಯ ಎಲ್ಲ ತಾಲೂಕು ಸೇರಿದಂತೆ ಎಲ್ಲಾ ಕಡೆ ಕ್ರೈಸ್ತ ಭಾಂದವರು ರಾತ್ರಿ‌ 11 ಗಂಟೆಯಿಂದಲೇ ಏಸುವಿನ ಪ್ರಾರ್ಥನೆ ಪ್ರಾರಂಭಿಸಿದರು. ರಾತ್ರಿ 12:30ರ ತನಕ ಎಲ್ಲ ಚರ್ಚ್​ಗಳಲ್ಲಿ ಎಲ್ಲರನ್ನು ರಕ್ಷಿಸಲಿ, ಎಲ್ಲರಲ್ಲೂ ಶಾಂತಿ ನೆಲೆಸುವಂತೆ ಆಗಲಿ ಎಂದು ಪ್ರಾರ್ಥಿಸಿದರು. ನಗರದ ಸೆಕ್ರೇಡ್​​ ಹಾರ್ಟ್ ಚರ್ಚ್​ನಲ್ಲಿ ನಡೆದ ಪ್ರಾರ್ಥನೆ ಪಾಧರ್ ಫ್ರಾನ್ಸಿಸ್ ಸೇರವೋ ಅವರ ಮುಂದಾಳತ್ವದಲ್ಲಿ ನಡೆಯಿತು.

ಏಸುಕ್ರಿಸ್ತ ಬೆತ್ಲಹೇಮ್​ನ ಬಡ ಕುರುಬನ ಮನೆಯ‌ ಕೊಟ್ಟಿಗೆಯಲ್ಲಿ ಹುಟ್ಟಿದವ. ಇದರಿಂದ ಚರ್ಚ್​ನ ಮುಂದೆ ಗೋದಳಿಯನ್ನು ನಿರ್ಮಿಸಿ, ಅದರಲ್ಲಿ ಬಾಲ‌ ಏಸುವಿಗೆ ಅಲಂಕಾರ ಮಾಡಿ ಸಂಭ್ರಮಿಸಿದರು. ಎಲ್ಲ ಚರ್ಚ್​ಗಳ ಮುಂದೆ ಬಾಲ ಏಸುವನ್ನು ಪ್ರತಿಷ್ಠಾಪಿಸಿ, ವಿವಿಧ ಅಲಂಕಾರಗಳನ್ನು‌ ಮಾಡಿ ಏಸು ಜನಿಸಿದ ದಿನವನ್ನೇ ನೆನ‌ಪು ಮಾಡುವಂತೆ ಮಾಡಲಾಗಿತ್ತು. 

ಇಂದು ಕ್ರೈಸ್ತ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಏಸುವನ್ನು ಆರಾಧಿಸಿ, ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ, ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಫಾದರ್ ಫ್ರಾನ್ಸಿಸ್ ಸೇರವೋ, ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಏಸುಕ್ರಿಸ್ತರು ಮಾನವರಾಗಿ ಭೂಮಿಗೆ ಬಂದ ವಿಶೇಷ ಹಬ್ಬ ಕ್ರಿಸ್​ಮಸ್​​. ದೇವರು ಭೂ ಲೋಕಕ್ಕೆ ಮನುಜರು ದೈವತ್ವದಲ್ಲಿ ಪಾಲುದಾರರಾಗಬೇಕು ಎಂದು ಬಂದರು. ನಾವು ದೇವರಂತೆ ಆಗಲು ಇರುವ ಒಂದೇ ಒಂದು ದಾರಿ ನಾವು ಮನುಷ್ಯತ್ವದಲ್ಲಿ ಬದುಕಬೇಕಿದೆ. ನಮ್ಮ ವಿಶ್ವ ಗುರುಗಳು ನಮಗೆ ಕರೆ ನೀಡಿದ್ದಾರೆ. ಪರಿಸರದೊಡನೆ, ನಾನು ಸಂಬಂಧ ಉಳಿಸಿ, ಬೆಳೆಸಿಕೊಂಡು ಹೋಗಬೇಕೆಂದು ಕರೆ ನೀಡಿದ್ದಾರೆ. ಈ ಪರಿಸರವನ್ನು ಮತ್ತು ಪರಸ್ಪರ ಸಂಬಂಧ ಬೆಳೆಸಿದಾಗ ನಾವು ದೈವತ್ವವನ್ನು ಹೊಂದಿದಂತೆ ಆಗುತ್ತದೆ ಎಂದರು.

ಇದನ್ನೂ ಓದಿ: ದೇಶದೆಲ್ಲೆಡೆ ಯೇಸುಕ್ರಿಸ್ತನ ಆರಾಧನೆ: ಮಧ್ಯರಾತ್ರಿಯಿಂದಲೇ ಸಂಭ್ರಮ; ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.